ಏಪ್ರಿಲ್ 1ಕ್ಕೆ ಇಸ್ರೋದಿಂದ “ಎಮಿಸ್ಯಾಟ್ ಉಪಗ್ರಹ” ಉಡಾವಣೆ

0
589

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಉಪಗ್ರಹ ‘ಎಮಿಸ್ಯಾಟ್’ ಏಪ್ರಿಲ್ 1ರಂದು ಬೆಳಗ್ಗೆ 9.30ಕ್ಕೆ ಉಡಾವಣೆಯಾಗಲಿದೆ. ಈ ಸ್ಯಾಟ್​ಲೈಟ್ ಜತೆಗೆ ವಿದೇಶದ 28 ಉಪಗ್ರಹಗಳನ್ನು ಪಿಎಸ್​ಎಲ್​ವಿ ರಾಕೆಟ್ ಮೂಲಕ ಬಾಹ್ಯಾಕಾಶದ ಬೇರೆ ಬೇರೆ ಕಕ್ಷೆಗಳಿಗೆ ಇಸ್ರೋ ಸೇರಿಸಲಿದೆ.

ಚೆನ್ನೈ: ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಉಪಗ್ರಹ ‘ಎಮಿಸ್ಯಾಟ್’ ಏಪ್ರಿಲ್ 1ರಂದು ಬೆಳಗ್ಗೆ 9.30ಕ್ಕೆ ಉಡಾವಣೆಯಾಗಲಿದೆ. ಈ ಸ್ಯಾಟ್​ಲೈಟ್ ಜತೆಗೆ ವಿದೇಶದ 28 ಉಪಗ್ರಹಗಳನ್ನು ಪಿಎಸ್​ಎಲ್​ವಿ ರಾಕೆಟ್ ಮೂಲಕ ಬಾಹ್ಯಾಕಾಶದ ಬೇರೆ ಬೇರೆ ಕಕ್ಷೆಗಳಿಗೆ ಇಸ್ರೋ ಸೇರಿಸಲಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಭಿವೃದ್ಧಿ ಪಡಿಸಿರುವ 436 ಕೆ.ಜಿ. ತೂಕದ ಎಮಿಸ್ಯಾಟ್ ಉಪಗ್ರಹವನ್ನು ಪಿಎಸ್​ಎಲ್​ವಿ ರಾಕೆಟ್ 749 ಕಿ.ಮೀ. ದೂರದ ಕಕ್ಷೆಗೆ ಹೊತ್ತೊಯ್ಯಲಿದೆ. ನಂತರ ಇದೇ ರಾಕೆಟ್ 504 ಕಿ.ಮೀ.ನ ಕಕ್ಷೆಗೆ ಇಳಿದು ಇನ್ನುಳಿದ 28 ಸ್ಯಾಟ್​ಲೈಟ್​ಗಳನ್ನು ಕಕ್ಷೆಗೆ ಬಿಡಲಿದೆ. ಈ ಪ್ರಕ್ರಿಯೆ ರಾಕೆಟ್ ಉಡಾವಣೆಯಾದ 180 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.