ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಚೆಂಡು ವಿರೂಪ :ನಿಕೋಲಸ್‌ ಪೂರನ್‌ ಅಮಾನತು

0
8

ಅಫ್ಗಾನಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.

ದುಬೈ (ಪಿಟಿಐ): ಅಫ್ಗಾನಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.

ತಪ್ಪು ಒಪ್ಪಿಕೊಂಡಿರುವ ಪೂರನ್ ಅವರೂ ಬಹಿರಂಗ ಕ್ಷಮೆ ಕೋರಿದ್ದಾರೆ. ಪೂರನ್ ಅವರು ಮುಂಬರಲಿರುವ ಟ್ವೆಂಟಿ–20 ಸರಣಿಯ ನಾಲ್ಕು ಪಂದ್ಯಗಳಲ್ಲಿ ಆಡುವುದಿಲ್ಲ.

ಲಖನೌನಲ್ಲಿ ನವೆಂಬರ್ 11 ರ  ಸೋಮವಾರ ನಡೆದಿದ್ದ ಏಕದಿನ ಪಂದ್ಯದಲ್ಲಿ  ಪೂರನ್ ಅವರು ಚೆಂಡನ್ನು ವಿರೂಪಗೊಳಿಸಿದ್ದು ಬೆಳಕಿಗೆ ಬಂದಿತ್ತು. ಕಾರ್ಯನಿರತ ಅಂಪೈರ್‌ಗಳಾದ ಬಿಸ್ಮಿಲ್ಲಾ ಶಿನ್ವಾರಿ, ಅಹಮದ್ ದುರಾನಿ, ಮೂರನೇ ಅಂಪೈರ್ ಅಹಮದ್ ಪಖ್ತೀನ್ ಮತ್ತು ನಾಲ್ಕನೇ ಅಂಪೈರ್ ಇಜಾತ್ ಉಲ್ಲಾ ಸಫಿ ಅವರೂ ಇದನ್ನು ದೃಢಪಡಿಸಿದ್ದಾರೆ. ಪಂದ್ಯ ರೆಫರಿ ಕ್ರಿಸ್ ಬ್ರಾಡ್ ಅವರು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಐಸಿಸಿಯ ಲೆವಲ್ ತ್ರೀ ನಿಯಮದ ಉಲ್ಲಂಘನೆ ಇದಾಗಿದೆ. ಇದರಲ್ಲಿ ನಾಲ್ಕು ಪಂದ್ಯಗಳ ಅಮಾನತು ಶಿಕ್ಷೆ ನೀಡಲಾಗುತ್ತದೆ.