ಏಕದಿನದಲ್ಲಿ ಕಿಂಗ್ ಕೊಹ್ಲಿ ಸೆಂಚುರಿ ನಂ.40

0
636

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 40ನೇ ಶತಕದ ದಾಖಲೆಯನ್ನು ಬರೆದಿದ್ದಾರೆ.

ನಾಗ್ಪುರ: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 40ನೇ ಶತಕದ ದಾಖಲೆಯನ್ನು ಬರೆದಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಮೋಘ ಶತಕ ಸಾಧನೆ ಮಾಡಿದರು. 

ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು ಶತಕಗಳ ಸಂಖ್ಯೆಯನ್ನು 65ಕ್ಕೆ ಏರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲೂ ಕೊಹ್ಲಿ 25 ಶತಕಗಳನ್ನು ಹೊಂದ್ದಿದ್ದಾರೆ. ಅಂದ ಹಾಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಇನ್ನಷ್ಟೇ ಶತಕ ದಾಖಲಿಸಬೇಕಿದೆ. 

ಏಕದಿನದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ಏಕದಿನದಲ್ಲಿ 49 ಶತಕಗಳನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಮುರಿಯಲು 30ರ ಹರೆಯದ ಕೊಹ್ಲಿಗೆ ಕೇವಲ 10 ಶತಕಗಳ ಅಗತ್ಯವಿದೆ. 

ಏತನ್ಮಧ್ಯೆ ಏಕದಿನ ಕ್ರಿಕೆಟ್‌ನಲ್ಲಿ 89ನೇ ಬಾರಿಗೆ 50ಕ್ಕೂ ಹೆಚ್ಚು ರನ್‌ಗಳ ಸಾಧನೆಯನ್ನು ಕೊಹ್ಲಿ ಮೆರೆದಿದ್ದಾರೆ. ಕೊಹ್ಲಿ ಹೆಸರಲ್ಲಿ 49 ಅರ್ಧಶತಕಗಳಿವೆ. 

ಆಸೀಸ್ ವಿರುದ್ಧ ನಾಗ್ಪುರ ಪಂದ್ಯದಲ್ಲೇ ಕೊಹ್ಲಿ, ನಾಯಕನಾಗಿ ಅತಿ ವೇಗದಲ್ಲಿ 9000 ರನ್ ಗಳಿಸಿದ ದಾಖಲೆಗೂ ಪಾತ್ರವಾಗಿದ್ದರು.