ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಡಿಜಿಟಲೀಕರಣ : ಕಾಗದ, ಸಮಯ, ಹಣ ಉಳಿಕೆ

0
653

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಬಂದು ಬೀಳುತ್ತಿದ್ದ ಲಕ್ಷಗಟ್ಟಲೆ ‘ಆನ್ಸರ್‌ ಕಂ ಮಾರ್ಕ್ಸ್ ಲಿಸ್ಟ್‌’ ಶೀಟ್‌ಗಳ (ಎಎಂಎಲ್‌) ರಾಶಿಗೆ ಈ ವರ್ಷದಿಂದ ಮುಕ್ತಿ ಸಿಗಲಿದೆ!

ಬೆಂಗಳೂರು: ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿಗೆ ಬಂದು ಬೀಳುತ್ತಿದ್ದ ಲಕ್ಷಗಟ್ಟಲೆ ‘ಆನ್ಸರ್‌ ಕಂ ಮಾರ್ಕ್ಸ್ ಲಿಸ್ಟ್‌’ ಶೀಟ್‌ಗಳ (ಎಎಂಎಲ್‌) ರಾಶಿಗೆ ಈ ವರ್ಷದಿಂದ ಮುಕ್ತಿ ಸಿಗಲಿದೆ!

ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ವಿದ್ಯಾರ್ಥಿಗಳ ಅಂಕಗಳನ್ನು ಭರ್ತಿ ಮಾಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದೇ ‘ಕಾಗದ ಮುಕ್ತ’ ವ್ಯವಸ್ಥೆಗೆ ನಾಂದಿ ಹಾಡಿದೆ. ಡಿಜಿಟಲೀಕರಣದ ಪರಿಣಾಮ ಕಾಗದ ಬಳಕೆ ನಿಲ್ಲಲಿದೆ, ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಆಗುತ್ತಿದ್ದ ಲೋಪಗಳಿಗೂ ಕಡಿವಾಣ ಬೀಳಲಿದೆ.

‘ಮಂಡಳಿಯ ಈ ಪ್ರಯತ್ನದಿಂದ ಸುಮಾರು 2.50 ಕೋಟಿ ಉಳಿತಾಯವಾಗಲಿದೆ’ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಎಎಂಎಲ್‌ ಶೀಟ್‌ಗಳು: ಮೌಲ್ಯಮಾಪಕರು ಪ್ರತಿ ದಿನ ಉತ್ತರ ಮೌಲ್ಯಮಾಪನ ಮಾಡಿದ ನಂತರ ಎಎಂಎಲ್‌ ಶೀಟ್‌ಗಳು ಅಂದರೆ, ಆನ್ಸರ್– ಮಾರ್ಕ್ಸ್‌ ಲಿಸ್ಟ್‌ಗೆ ಆಯಾ ವಿದ್ಯಾರ್ಥಿಗಳ ಪಡೆದ ಅಂಕವನ್ನು ಭರ್ತಿ ಮಾಡುತ್ತಿದ್ದರು. ಸಂಜೆ ಅವುಗಳ ಬಂಡಲ್‌ಗಳನ್ನು ಸಿದ್ಧಪಡಿಸಿ ರಾಜ್ಯದ ಮೂಲೆ ಮೂಲೆಯಿಂದ ಸಿಬ್ಬಂದಿ ಬಸ್ಸುಗಳಲ್ಲಿ ಹೊರಟು ಬೆಳಿಗ್ಗೆ ಹೊತ್ತಿಗೆ ಮಂಡಳಿಗೆ ತಂದು ಹಾಕುತ್ತಿದ್ದರು. ಪ್ರತಿ ವರ್ಷ 48 ರಿಂದ 50 ಲಕ್ಷ ಬಂಡಲ್‌ಗಳು ಬಂದು ಬೀಳುತ್ತಿದ್ದವು. ಈ ಶೀಟ್‌ಗಳನ್ನು ಸ್ಕ್ಯಾನ್‌ ಮಾಡಿಸಲಾಗುತ್ತಿತ್ತು. ಎಎಂಎಲ್‌ ಶೀಟ್‌ಗಳಲ್ಲಿ ಅಂಕಗಳನ್ನು ನಮೂದಿಸಿದ್ದನ್ನು ಶೇಡ್‌ ಮಾಡಿರುತ್ತಾರೆ. ಕೆಲವು ಸಂದರ್ಭದಲ್ಲಿ ಸ್ಕ್ಯಾನ್‌ ಮಾಡಿ
ದಾಗ ಅಂಕಗಳು ಸರಿಯಾಗಿ ಸ್ಕ್ಯಾನ್‌ ಆಗುತ್ತಿರಲಿಲ್ಲ. 77 ಅಂಕ ಇದ್ದ ಕಡೆ 7 ಮಾತ್ರ ಕಾಣಿಸುತ್ತಿರುತ್ತದೆ. ಎಲ್ಲ ವಿಷಯ
ಗಳಲ್ಲಿ ಶೇ 90 ಅಥವಾ 95 ರಷ್ಟು ಫಲಿತಾಂಶ ಪಡೆದವರು ಒಂದು ವಿಷಯದಲ್ಲಿ 7 ಅಂಕ ಬಂದಿದ್ದನ್ನು ನೋಡಿ ಆತಂಕಕ್ಕೆ ಒಳಗಾಗಿ ರೀ ಟೋಟಲ್‌ಗೆ ಹಾಕುತ್ತಿದ್ದರು. ಕಳೆದ ವರ್ಷ ಸುಮಾರು 1.50 ಲಕ್ಷ ಎಎಂಎಸ್‌ ಶೀಟ್‌ಗಳಲ್ಲಿ ಇಂತಹ ಲೋಪಗಳು ಆಗಿದ್ದವು. ಡಿಜಿಟಲೀಕರಣದ ಮೂಲಕ ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆವು ಎಂದು ಸುಮಂಗಲಾ ತಿಳಿಸಿದರು.

ಹೊಸ ವ್ಯವಸ್ಥೆ: ಹೊಸವ್ಯವಸ್ಥೆಯಲ್ಲಿ ಮೌಲ್ಯಮಾಪಕರಿಗೆ ಕೋಡ್‌ ನಂಬರ್‌ ಇರುತ್ತದೆ. ಅದಕ್ಕೆ ಕಂಪ್ಯೂಟರ್‌ ಸಂಖ್ಯೆ ಜೋಡಿಸಲಾಗಿರುತ್ತದೆ.

ಪ್ರತಿ ದಿನ 10 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದ ತಕ್ಷಣವೇ ಮೌಲ್ಯಮಾಪಕರು ಕಂಪ್ಯೂಟರ್‌ ಆನ್‌ ಮಾಡಿ, ವಿದ್ಯಾರ್ಥಿಯ ರಿಜಿಸ್ಟ್ರಿ ನಂಬರ್‌ ಒತ್ತಬೇಕು. ಆಗ ಆತನ ಮಾಹಿತಿಯ ಪೇಜ್‌ ತೆರೆದುಕೊಳ್ಳುತ್ತದೆ. ಆಯಾಯ ವಿಷಯಗಳಿಗೆ ಅಂಕಗಳನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆಗೆ ಬೇಕಾಗುವ ಸಮಯ ಒಂದು ನಿಮಿಷ ಎಂದು ಸುಮಂಗಲಾ ವಿವರಿಸಿದರು.

ಎಲ್ಲ ವಿಷಯಗಳ ಅಂಕಗಳನ್ನು ಎಂಟ್ರಿ ಮಾಡಿದ ತಕ್ಷಣ ಟೋಟಲ್‌ ಕೂಡ ಬರುತ್ತದೆ. ಸಬ್‌ಮಿಟ್‌ ಬಟನ್ ಒತ್ತಿದ ತಕ್ಷಣ ಅದು ಡಿಸಿ ಹೋಗುತ್ತದೆ. ಒಬ್ಬ ಮೌಲ್ಯಮಾಪಕನ ಮೇಲೆ 6 ಜನ ಎಇಗಳು, ಒಬ್ಬ ಡಿಸಿ ಮತ್ತು ಜೆಇ ಇರುತ್ತಾನೆ (ಅಧಿಕಾರಿಗಳು). ಡಬಲ್‌ ಎಂಟ್ರಿ ವ್ಯವಸ್ಥೆ ಇರುತ್ತದೆ. ತಪ್ಪಾಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ ಎಂದರು.