ಎಸ್‌ಬಿಐ: ಬಡ್ಡಿ ದರ ಕಡಿತ

0
32

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.50ರವರೆಗೆ ಇಳಿಸಿದೆ.

ನವದೆಹಲಿ (ಪಿಟಿಐ): ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.50ರವರೆಗೆ ಇಳಿಸಿದೆ.

ಸಾಲದ ಮೇಲಿನ ಬಡ್ಡಿ ದರಗಳು ಇಳಿಕೆಯಾಗುತ್ತಿರುವ ಮತ್ತು ನಗದು ತನ ಹೆಚ್ಚಳದ ಕಾರಣಕ್ಕೆ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇದೇ ಆಗಸ್ಟ್ 26ರಿಂದ ಜಾರಿಗೆ ಬರುವಂತೆ ಕಡಿಮೆ ಮಾಡಲಾಗಿದೆ. ಉಳಿತಾಯ ಖಾತೆಯಲ್ಲಿನ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 3ರಷ್ಟು ಮತ್ತು 1 ಲಕ್ಷದವರೆಗಿನ ಮೊತ್ತಕ್ಕೆ ಶೇ 3.50ರಷ್ಟು ಬಡ್ಡಿ ದರ ಉಳಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್‌ ಹೇಳಿಕೆಯಲ್ಲಿ ತಿಳಿಸಿದೆ.

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ‘ಎಸ್‌ಬಿಐ’ನ ಈ ನಿರ್ಧಾರವನ್ನು ಇತರ ಬ್ಯಾಂಕ್‌ಗಳೂ ಅನುಸರಿಸುವ ಸಾಧ್ಯತೆ ಇದೆ. ಉಳಿತಾಯ ಬಡ್ಡಿ ಮೇಲಿನ ಆದಾಯ ಕಡಿಮೆಯಾಗಲಿದೆ.
 
ರಿಟೇಲ್‌ ಅವಧಿ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 0.10 ರಿಂದ ಶೇ 0.50ರವರೆಗೆ ಮತ್ತು ಸಗಟು ಅವಧಿ ಠೇವಣಿ ಮೇಲೆ ಶೇ 0.30 ರಿಂದ ಶೇ 0.70ರವರೆಗೆ ಬಡ್ಡಿ ದರ ಇಳಿಸಲಾಗಿದೆ.
 
ಸ್ಥಿರ ಠೇವಣಿ ಬಡ್ಡಿ ದರ ಇಳಿಕೆ
 
ಅವಧಿ ಹಳೇ ಬಡ್ಡಿದರ ಹೊಸ ದರ
7 ರಿಂದ 45 ದಿನ ಶೇ 5.00 ಶೇ 4.50
46 ರಿಂದ 179 ದಿನ ಶೇ 5.75 ಶೇ 5.50
180 ರಿಂದ ಒಂದು ವರ್ಷದೊಳಗೆ ಶೇ 6.25 ಶೇ 6.00
1 ರಿಂದ 2 ವರ್ಷ ಶೇ 6.80 ಶೇ 6.70
5 ರಿಂದ 10 ವರ್ಷ ಶೇ 6.50 ಶೇ 6.25