ಎಸ್‌ಬಿಐ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

0
288

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.10 ರವರೆಗೂ ಹೆಚ್ಚಿಸಿದೆ.

ಮುಂಬೈ (ಪಿಟಿಐ): ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.10ರವರೆಗೂ ಹೆಚ್ಚಿಸಿದೆ.

1 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಸಂಬಂಧಿಸಿದ ಬಡ್ಡಿ ದರವು ಶೇ 0.05 ರಿಂದ ಶೇ 0.10 ರವರೆಗೆ ಏರಿಕೆಯಾಗಿದೆ. ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಿಂದ ಗ್ರಾಹಕರಿಗೆ ನೀಡುವ ಬಡ್ಡಿ ದರ ಶೇ 6.80ಕ್ಕೆ ತಲುಪಿದೆ ಎಂದು ಬ್ಯಾಂಕ್‌ ಜಾಲತಾಣದಲ್ಲಿ ತಿಳಿಸಿದೆ.

ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಬಡ್ಡಿದರ ಶೇ 6.75 ರಿಂದ ಶೇ 6.80ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಶೇ 7.25 ರಿಂದ ಶೇ 7.30ಕ್ಕೆ ಏರಿಕೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಎಚ್‌ಡಿಎಫ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿದರವನ್ನು ಕ್ರಮವಾಗಿ ಶೇ 0.5 ಮತ್ತು ಶೇ 0.25ರವರೆಗೂ ಏರಿಕೆ ಮಾಡಿದ್ದವು.