ಎಸ್‌ಬಿಐ ಗ್ರಾಹಕರೇ, ನೆಟ್‌ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಬಹುದು ಜೋಕೆ!

0
428

ಎಸ್‌ಬಿಐನ ಇಂಟರ್‌ನೆಟ್‌ ಬ್ಯಾಂಕಿಂಗ್‌ ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆ ಜತೆಗೆ ಡಿಸೆಂಬರ್‌ 1ರ ಗಡುವಿನೊಳಗೆ ನೋಂದಣಿ ಮಾಡಬೇಕು.

ಹೊಸದಿಲ್ಲಿ: ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ(ಎಸ್‌ಬಿಐ) ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಯನ್ನು ಬಳಸುತ್ತಿರುವಿರಾ? ಅಂದಹಾಗೇ, ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಖಾತೆಗೆ ನೋಂದಣಿ ಮಾಡಿರುವಿರಾ? ಇಲ್ಲ ಅನ್ನುವುದಾದರೆ, ಡಿಸೆಂಬರ್.1ರ ಬಳಿಕ ನಿಮ್ಮ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಯು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 

ಎಸ್‌ಬಿಐನ ಇಂಟರ್‌ನೆಟ್‌ ಬ್ಯಾಂಕಿಂಗ್‌ ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆ ಜತೆಗೆ ಡಿಸೆಂಬರ್‌ 1ರ ಗಡುವಿನೊಳಗೆ ನೋಂದಣಿ ಮಾಡಬೇಕು. ಇಲ್ಲದಿದ್ದರೆ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ ಸ್ಥಗಿತವಾಗಲಿದೆ ಎಂದು ಎಸ್‌ಬಿಐ, ಈಗಾಗಲೇ ಗ್ರಾಹಕರಿಗೆ ಸೂಚಿಸಿದೆ. ಬ್ಯಾಂಕ್‌ನ ಇಂಟರ್‌ನೆಟ್‌ ಬ್ಯಾಂಕಿಂಗ್‌ ಜಾಲತಾಣದಲ್ಲಿ ಈ ಬಗ್ಗೆ ಸೂಚನೆಗಳಿವೆ. ಆ ಪ್ರಕಾರ ನಿಮ್ಮ ಬ್ಯಾಂಕ್‌ ಶಾಖೆ ಮೂಲಕ ಮೊಬೈಲ್‌ ಸಂಖ್ಯೆಯನ್ನು ನೋಂದಣಿ ಮಾಡಬೇಕು. ಈಗಾಗಲೇ ಮಾಡಿದ್ದರೇ, ಆತಂಕ ಪಡುವ ಅಗತ್ಯವಿಲ್ಲ. 

ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಜು.6,2017ರಂದು ಹೊರಡಿಸಿದ ಸುತ್ತೋಲೆ ಪ್ರಕಾರ,”ಬ್ಯಾಂಕ್‌ಗಳು ಗ್ರಾಹಕರ ಮೊಬೈಲ್‌ ಸಂಖ್ಯೆಗಳನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಎಸ್‌ಎಂಎಸ್‌ ಅಲರ್ಟ್‌ ಕಳಿಸಲು ಇದರಿಂದ ಅನುಕೂಲ. ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಉತ್ತೇಜಿಸಲು ಈ ಕ್ರಮವನ್ನು ಆರ್‌ಬಿಐ ಕಡ್ಡಾಯಗೊಳಿಸಿದ್ದು, ಅದನ್ನು ಜಾರಿಗೆ ತರಲು ಎಸ್‌ಬಿಐ ಮುಂದಾಗಿದೆ.