ಎಸ್‌ಬಿಐ ಗೃಹ ಸಾಲ ಬಡ್ಡಿ ದರ ಇಳಿಕೆ

0
18

ದೇಶದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐನಿಂದ ಗೃಹ ಸಾಲ ಪಡೆಯಲು ಬಯಸುವವರಿಗೆ ಇದು ಸಿಹಿ ಸುದ್ದಿ. ಎಸ್‌ಬಿಐ ತನ್ನ ಎಂಸಿಎಲ್‌ಆರ್‌ ದರವನ್ನು ಶೇ.0.05ರಷ್ಟು ಕಡಿತಗೊಳಿಸಿದ್ದು, ಗೃಹ ಸಾಲ ಬಡ್ಡಿ ದರ ಇಳಿಕೆಯಾಗಲಿದೆ.

ಹೊಸದಿಲ್ಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐನಿಂದ ಗೃಹ  ಸಾಲ ಪಡೆಯಲು ಬಯಸುವವರಿಗೆ ಇದು ಸಿಹಿ ಸುದ್ದಿ.

ಎಸ್‌ಬಿಐ ತನ್ನ ಎಂಸಿಎಲ್‌ಆರ್‌ ದರವನ್ನು ಶೇ.0.05ರಷ್ಟು ಕಡಿತಗೊಳಿಸಿದ್ದು, ಗೃಹ ಸಾಲ ಬಡ್ಡಿ ದರ ಇಳಿಕೆಯಾಗಲಿದೆ. 1 ವರ್ಷ ಅವಧಿಯ ಎಂಸಿಎಲ್‌ಆರ್‌ ದರವನ್ನು ಶೇ.8.5ರಿಂದ ಶೇ.8.45ಕ್ಕೆ ಇಳಿಸಿದೆ. ಎಸ್‌ಬಿಐ ಒಂದು ತಿಂಗಳಿನಲ್ಲಿ ಎರಡನೇ ಬಾರಿಗೆ ಗೃಹ ಸಾಲ ಬಡ್ಡಿ ದರವನ್ನು ಇಳಿಸಿದಂತಾಗಿದೆ. ಈ ಮೊದಲು ಏಪ್ರಿಲ್‌ 10ರಂದು ತಗ್ಗಿಸಿತ್ತು. ಬ್ಯಾಂಕ್‌ ನೀಡುವ ಎಂಸಿಎಲ್‌ಆರ್‌ ಆಧಾರಿತ ಎಲ್ಲ ಗೃಹಸಾಲಗಳ ಬಡ್ಡಿ ದರ ಇಳಿಕೆಯಾಗಲಿದೆ. ಮೇ 10ರಿಂದ ಪರಿಷ್ಕೃತ ದರ ಅನ್ವಯವಾಗಿದೆ. 

ಎಸ್‌ಬಿಐ ಗೃಹ ಸಾಲ ಮತ್ತು ವಾಹನ ಸಾಲ ಮಾರುಕಟ್ಟೆಯಲ್ಲಿ 34 ಪರ್ಸೆಂಟ್‌ ಪಾಲು ಹೊಂದಿರುವುದಾಗಿ ತಿಳಿಸಿದೆ. ಆರ್‌ಬಿಐ ಕಳೆದ ಏಪ್ರಿಲ್‌ನಲ್ಲಿ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಎಸ್‌ಬಿಐ ಬಡ್ಡಿ ದರ ಇಳಿಸಿತ್ತು. 

ಅಗ್ಗವಾಗುತ್ತಿದೆ ಗೃಹ ಸಾಲ ಬಡ್ಡಿ ದರ:
ಕಳೆದ ಕೆಲವು ತಿಂಗಳುಗಳಿಂದ ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಎಂಸಿಎಲ್‌ಆರ್‌ ದರವನ್ನು ಇಳಿಕೆ ಮಾಡುತ್ತಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೂಡ ಎಂಸಿಎಲ್‌ಆರ್‌ ದರವನ್ನು ಇಳಿಸಿದೆ. 

ಗೃಹ ಸಾಲ ಬಡ್ಡಿ ದರ ಇಳಿದರೆ ಸಾಲದ ವೆಚ್ಚ ಕಡಿಮೆಯಾಗುತ್ತದೆ. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಅನಕೂಲವಾಗುತ್ತದೆ. ಆರ್ಥಿಕ ಬೆಳವಣಿಗೆಗೂ ಇದು ಸಹಕರಿಸುತ್ತದೆ. 

ಎಸ್‌ಬಿಐ ಠೇವಣಿ ದರ ಇಳಿಕೆ:
ಎಸ್‌ಬಿಐ 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.7ರಿಂದ ಶೇ.6.8ಕ್ಕೆ ಇಳಿಸಿದೆ. ಇದು 1-7 ವರ್ಷದ ಅವಧಿಯ ಠೇವಣಿಗೆ ಅನ್ವಯವಾಗುತ್ತದೆ. ಮೇ 9ರಿಂದ ಪರಿಷ್ಕೃತ ದರ ಅನ್ವಯವಾಗುತ್ತದೆ.