ಎಸ್‌ಬಿಐ ಗೃಹ ಸಾಲ ಅಗ್ಗ

0
357

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ ) 2019 ಫೆಬ್ರುವರಿ 8 ರ ಶುಕ್ರವಾರದಿಂದಲೇ ಅನ್ವಯಿಸುವಂತೆ ₹ 30 ಲಕ್ಷದವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ತಗ್ಗಿಸಿದೆ.

ಮುಂಬೈ (ಪಿಟಿಐ): ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) 2019 ಫೆಬ್ರುವರಿ 8 ರ  ಶುಕ್ರವಾರದಿಂದಲೇ ಅನ್ವಯಿಸುವಂತೆ  30 ಲಕ್ಷದವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ತಗ್ಗಿಸಿದೆ.

‘ಆರ್‌ಬಿಐನ ಬಡ್ಡಿದರ ಕಡಿತದ ನಿರ್ಧಾರಕ್ಕೆ ಅನುಗುಣವಾಗಿ ಗೃಹ ಸಾಲದ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಗೃಹ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಅತಿ ಹೆಚ್ಚಿನ ಪಾಲು ಹೊಂದಿದೆ. ‌ರೆಪೊ ದರ ಕಡಿತದ ಲಾಭವನ್ನು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ರಜನೀಶ್‌ ಕುಮಾರ್ ತಿಳಿಸಿದ್ದಾರೆ.

ಆರ್‌ಬಿಐ ತನ್ನ ಆರನೇ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು (ರೆಪೊ) ಶೇ 6.50 ರಿಂದ ಶೇ 6.25ಕ್ಕೆ, ಅಂದರೆ ಶೇ 0.25ರಷ್ಟು ಕಡಿಮೆ ಮಾಡಿದೆ. ಇದಕ್ಕೆ ತಕ್ಷಣದ ಪ್ರತಿಕ್ರಿಯೆ ಎನ್ನುವಂತೆ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಆರು ತಿಂಗಳ ಅವಧಿ ಸಾಲದ ಎಂಸಿಎಲ್‌ಆರ್‌ ಅನ್ನು ಶೇ 0.05ರಷ್ಟು ಇಳಿಕೆ ಮಾಡಿತ್ತು. ಇನ್ನುಳಿದ ಬ್ಯಾಂಕ್‌ಗಳು ಸಹ ಗೃಹ ಸಾಲದ ಬಡ್ಡಿದರಗಳಲ್ಲಿ ಇಳಿಕೆ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.