ಎಸ್‌ಬಿಐ ಎಟಿಎಂ ನಗದು ಮಿತಿ ಕಡಿತ ಇಂದಿನಿಂದ ಜಾರಿ

0
519

ಎಟಿಎಂಗಳಿಂದ ನಗದು ಪಡೆಯುವ ಕೆಲವು ಡೆಬಿಟ್‌ ಕಾರ್ಡ್‌ಗಳ ದಿನದ ಗರಿಷ್ಠ ಮಿತಿಯನ್ನು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ₹ 20 ಸಾವಿರಕ್ಕೆ ಇಳಿಸಿದ್ದು, ಹೊಸ ನಿಯಮವು ಬುಧವಾರದಿಂದ ಜಾರಿಗೆ ಬರಲಿದೆ.

ನವದೆಹಲಿ (ಪಿಟಿಐ): ಎಟಿಎಂಗಳಿಂದ ನಗದು ಪಡೆಯುವ ಕೆಲವು ಡೆಬಿಟ್‌ ಕಾರ್ಡ್‌ಗಳ ದಿನದ ಗರಿಷ್ಠ ಮಿತಿಯನ್ನು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) 20 ಸಾವಿರಕ್ಕೆ ಇಳಿಸಿದ್ದು, ಹೊಸ ನಿಯಮವು ಬುಧವಾರದಿಂದ ಜಾರಿಗೆ ಬರಲಿದೆ.

ಬ್ಯಾಂಕ್‌ನ ಅತಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಹೊಂದಿರುವ ಕ್ಲಾಸಿಕ್‌ ಮತ್ತು ಮ್ಯಾಸ್ಟ್ರೊ ಡೆಬಿಟ್‌ ಕಾರ್ಡ್‌ಗಳ ಮೂಲಕ ದಿನವೊಂದರಲ್ಲಿ ಪಡೆಯಲಾಗುತ್ತಿದ್ದ 40 ಸಾವಿರದಷ್ಟಿದ್ದ ಗರಿಷ್ಠ ಮಿತಿಯನ್ನು  20 ಸಾವಿರಕ್ಕೆ ಇಳಿಸಲಾಗಿದೆ. ಬ್ಯಾಂಕ್‌ನ ಇತರ ಡೆಬಿಟ್‌ ಕಾರ್ಡ್‌ಗಳಿಗೆ ಈ ನಿಬಂಧನೆ ಅನ್ವಯಗೊಳ್ಳುವುದಿಲ್ಲ.

 ಎಟಿಎಂಗಳಲ್ಲಿ ಡೆಬಿಟ್‌ ಕಾರ್ಡ್‌ಗಳಿಂದ ಪ್ರತಿ ದಿನ ಸರಾಸರಿ 20 ಸಾವಿರಕ್ಕಿಂತ ಕಡಿಮೆ ಹಣ ಪಡೆಯಲಾಗುತ್ತಿದೆ. ಮಿತಿ ತಗ್ಗಿಸಿರುವುದರಿಂದ ವಂಚನೆ ತಡೆಗಟ್ಟಲು ಮತ್ತು ನಗದುರಹಿತ ವಹಿವಾಟು ಹೆಚ್ಚಿಸಲು ನೆರವಾಗಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.