ಎಸ್‌ಬಿಐ: ಇಂದಿನಿಂದ(ಅಕ್ಟೋಬರ್ 16 ರಿಂದ) ಯೋನೊ ಹಬ್ಬದ ಉತ್ಸವ

0
202

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಡಿಜಿಟಲ್ ಸೇವಾ ಸೌಲಭ್ಯ ಯೋನೊ ಆ್ಯಪ್‍ (YONO) ನಲ್ಲಿ 6 ದಿನಗಳ ಹಬ್ಬದ ಖರೀದಿ ಉತ್ಸವ ಇದೇ 16 ರಿಂದ 21ವರೆಗೆ ನಡೆಯಲಿದೆ.

ಮುಂಬೈ (ಪಿಟಿಐ): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಡಿಜಿಟಲ್ ಸೇವಾ ಸೌಲಭ್ಯ ಯೋನೊ ಆ್ಯಪ್‍ (YONO) ನಲ್ಲಿ 6 ದಿನಗಳ ಹಬ್ಬದ ಖರೀದಿ ಉತ್ಸವ ಇದೇ 16 ರಿಂದ 21ವರೆಗೆ ನಡೆಯಲಿದೆ.

ಆನ್‌ಲೈನ್‌ನಲ್ಲಿ ‘ಯೋನೊ’ ಆ್ಯಪ್‌ ಬಳಸಿ ಸರಕು ಖರೀದಿಸುವ ಬ್ಯಾಂಕ್‌ನ ಗ್ರಾಹಕರು ಆಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಲಿದ್ದಾರೆ.

 ಎಲೆಕ್ಟ್ರಾನಿಕ್‌, ಫ್ಯಾಷನ್‌, ಚಿನ್ನಾಭರಣ ಮತ್ತು ಪ್ರವಾಸಕ್ಕೆ ಸಂಬಂಧಿಸಿದಂತೆ 14 ಇ–ಕಾಮರ್ಸ್‌ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲೆ ಗರಿಷ್ಠ ಶೇ 40ರವರೆಗೆ ಬೆಲೆ ಕಡಿತ ಘೋಷಿಸಿವೆ. ಇದರ ಜತೆಗೆ, ಎಸ್‌ಬಿಐ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ದಾರರು ಹೆಚ್ಚುವರಿಯಾಗಿ ಶೇ 10ರಷ್ಟು ನಗದು ವಾಪಸ್‌ ಪಡೆಯಲಿದ್ದಾರೆ ಎಂದು ಬ್ಯಾಂಕ್‌ ತಿಳಿಸಿದೆ.