ಎಸ್‌ಬಿಐ:ಎನ್‌ಇಎಫ್‌ಟಿ ಐಎಂಪಿಎಸ್‌ ಶುಲ್ಕ ರದ್ದು

0
9

ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ ಸೇವೆಗಳಿಗೆ ವಸೂಲಿ ಮಾಡುತ್ತಿದ್ದ ಶುಲ್ಕವನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ರದ್ದು ಮಾಡಿದೆ.

ನವದೆಹಲಿ (ಪಿಟಿಐ):  ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ ಸೇವೆಗಳಿಗೆ ವಸೂಲಿ ಮಾಡುತ್ತಿದ್ದ ಶುಲ್ಕವನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ರದ್ದು ಮಾಡಿದೆ.

ಈ ನಿರ್ಧಾರ ಈ ತಿಂಗಳ(ಜುಲೈ) 1ರಿಂದಲೇ ಅನ್ವಯವಾಗಲಿದೆ. ಬ್ಯಾಂಕಿಂಗ್‌ ವಹಿವಾಟಿನಲ್ಲಿ ಶೇ 25ರಷ್ಟು ಪಾಲು ಹೊಂದಿರುವ ಎಸ್‌ಬಿಐ, ಮೊಬೈಲ್‌ ಗಳಿಂದ ತಕ್ಷಣಕ್ಕೆ ಹಣ ಪಾವತಿಸುವ ‘ಐಎಂಪಿಎಸ್‌’ ಶುಲ್ಕವನ್ನೂ ಆಗಸ್ಟ್‌ 1ರಿಂದ ರದ್ದು ಮಾಡಲಿದೆ.

ಶುಲ್ಕಗಳು ರದ್ದಾಗಿರುವುದರಿಂದ ಹೆಚ್ಚೆಚ್ಚು ಗ್ರಾಹಕರು ಇನ್ನು ಮುಂದೆ ಡಿಜಿಟಲ್‌ ವಹಿವಾಟಿನತ್ತ ಆಕರ್ಷಿತರಾಗಲಿದ್ದಾರೆ ಎಂದು ಬ್ಯಾಂಕ್‌ ತಿಳಿಸಿದೆ.
 
ಡಿಜಿಟಲ್‌ ವಹಿವಾಟು ಉತ್ತೇಜಿಸಲು ಈ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸದಿರಲು ಭಾರತೀಯ ರಿಸರ್ವ್‌ ಬ್ಯಾಂಕ್ ಈ ಮೊದಲೇ ಪ್ರಕಟಿಸಿತ್ತು. ಶುಲ್ಕ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಜುಲೈ 1ರಿಂದಲೇ ಗ್ರಾಹಕರಿಗೆ ವರ್ಗಾಯಿಸಬೇಕು ಎಂದೂ ಸೂಚಿಸಿತ್ತು. ಬ್ಯಾಂಕ್‌ ಗ್ರಾಹಕರು  2 ಲಕ್ಷದವರೆಗಿನ ನಗದು ವರ್ಗಾವಣೆಗೆ ‘ಎನ್‌ಇಎಫ್‌ಟಿ’ ಮತ್ತು 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ‘ಆರ್‌ಟಿಜಿಎಸ್‌’ ಬಳಸುತ್ತಿದ್ದಾರೆ. ಬ್ಯಾಂಕ್‌ಗಳು ‘ಎನ್‌ಇಎಫ್‌ಟಿ’ಗೆ 1ರಿಂದ 5 ಮತ್ತು ‘ಆರ್‌ಟಿಜಿಎಸ್‌’ಗೆ  5 ರಿಂದ  50ರವರೆಗೆ ಶುಲ್ಕ ವಿಧಿಸುತ್ತಿವೆ.