ಎಲ್‌ಪಿಜಿ ಬುಕ್ಕಿಂಗ್‌ಗೆ ಸಾಮಾನ್ಯ ಸೇವಾ ಕೇಂದ್ರ

0
238

ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ವಿತರಿಸಲು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಆರಂಭಿಸಲಿವೆ.

ನವದೆಹಲಿ (ಪಿಟಿಐ): ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ವಿತರಿಸಲು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಆರಂಭಿಸಲಿವೆ.

ಭಾರತ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್‌ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪನಿಗಳು ಈ ಸಂಬಂಧ ಒಪ್ಪಂದ ಮಾಡಿಕೊಂಡಿವೆ. 

ದೇಶದಾದ್ಯಂತ 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಎಲ್‌ಪಿಜಿಗೆ ಹೊಸ ಸಂಪರ್ಕ, ಸಿಲಿಂಡರ್‌ ಮರುಭರ್ತಿ ಮತ್ತು ಸಿಲಿಂಡರ್ ವಿತರಣೆ ಆರಂಭವಾಗಲಿದೆ.

‘ಪ್ರಾಯೋಗಿಕ ಸೇವೆಯು ಒಡಿಶಾದಲ್ಲಿ ಆರಂಭವಾಗಲಿದೆ. ಇದುವರೆಗೆ ಕಂಪನಿಗಳು ವಿತರಣೆಗೆ ಹಣ ವೆಚ್ಚ ಮಾಡುತ್ತಿದ್ದವು. ಇನ್ನುಮುಂದೆ ವಿತರಕರು ತಮ್ಮ ವರಮಾನವನ್ನು ಸಿಎಸ್‌ಸಿ ಜತೆ ಹಂಚಿಕೊಳ್ಳಲಿವೆ. ನಮ್ಮ ವಿತರಣಾ ವ್ಯವಸ್ಥೆಯು ಇನ್ನಷ್ಟು ಪಾರದರ್ಶಕವಾಗಲಿದೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.