ಎಲ್ಲವೂ ತುರ್ತು ಅರ್ಜಿಗಳಾಗದು, ಮಾನದಂಡ ಅಗತ್ಯ: ಹೊಸ ಸಿಜೆ ರಂಜನ್‌ ಗೊಗೊಯಿ

0
614

ಅಧಿಕಾರ ಸ್ವೀಕರಿಸಿದ ಕೆಲ ಹೊತ್ತಲ್ಲೇ ಸುಪ್ರೀಂ ಕೋರ್ಟ್‌ಗೆ ಹೊಸ ನಿಯಮಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ರೂಪಿಸಿದ್ದಾರೆ. ತುರ್ತು ವಿಭಾಗದಲ್ಲಿ ವಿಚಾರಣೆ ನಡೆಸುವ ಪ್ರಕರಣಗಳಿಗೆ ಹೊಸ ಮಾನದಂಡ ರೂಪಿಸಿರುವ ಅವರು, ಇವತ್ತೇ ಒಬ್ಬನಿಗೆ ಗಲ್ಲು ಶಿಕ್ಷೆ ನಿಗದಿ ಅಥವಾ ಒಬ್ಬನನ್ನು ಮನೆಯಿಂದ ಹೊರಹಾಕಿರುವಂತಹ ಸಂದರ್ಭಗಳನ್ನು ಹೊರತು ಪಡಿಸಿ, ಉಳಿದವುಗಳನ್ನು ತುರ್ತು ವಿಚಾರಣೆ ನಡೆಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಹೊಸದಿಲ್ಲಿ: ಅಧಿಕಾರ ಸ್ವೀಕರಿಸಿದ ಕೆಲ ಹೊತ್ತಲ್ಲೇ ಸುಪ್ರೀಂ ಕೋರ್ಟ್‌ಗೆ ಹೊಸ ನಿಯಮಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ರೂಪಿಸಿದ್ದಾರೆ. 

ತುರ್ತು ವಿಭಾಗದಲ್ಲಿ ವಿಚಾರಣೆ ನಡೆಸುವ ಪ್ರಕರಣಗಳಿಗೆ ಹೊಸ ಮಾನದಂಡ ರೂಪಿಸಿರುವ ಅವರು, ಇವತ್ತೇ ಒಬ್ಬನಿಗೆ ಗಲ್ಲು ಶಿಕ್ಷೆ ನಿಗದಿ ಅಥವಾ ಒಬ್ಬನನ್ನು ಮನೆಯಿಂದ ಹೊರಹಾಕಿರುವಂತಹ ಸಂದರ್ಭಗಳನ್ನು ಹೊರತು ಪಡಿಸಿ, ಉಳಿದವುಗಳನ್ನು ತುರ್ತು ವಿಚಾರಣೆ ನಡೆಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. 

ತುರ್ತು ಅಗತ್ಯತೆಗಳಾಗಿ ಸರಿಯಾಗಿ ನಿಭಾಯಿಸಲು ಇಂತಹ ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡಬೇಕಾಗುತ್ತದೆ. ತುರ್ತು ವಿಭಾಗದಲ್ಲಿ ಎಲ್ಲ ಕೇಸುಗಳನ್ನು ವಿಚಾರಣೆ ನಡೆಸಲಾಗದು ಎಂದು ಅವರು ಹೇಳಿದ್ದಾರೆ. 

ಈ ಸಂಬಂಧ ಮಾನದಂಡಗಳನ್ನು ರೂಪಿಸಲಾಗುವುದು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ವಿಚಾರದಲ್ಲೂ ಸಾಕಷ್ಟು ಸುಧಾರಣೆ ಅಗತ್ಯವಿದೆ ಎಂದು ಗೊಗೊಯಿ ಅಭಿಪ್ರಾಯಪಟ್ಟಿದ್ದಾರೆ. 

ಅಕ್ಟೋಬರ್ 3 ರ ಬುಧವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. 2019ರ ನವಂಬರ್‌ 13ರ ವರೆಗೆ ಅವರ ಅಧಿಕಾರದ ಅವಧಿ ಇರಲಿದೆ