ಎಮಿಸ್ಯಾಟ್​ ಹೊತ್ತ ಇಸ್ರೋದ ಪಿಎಸ್​ಎಲ್​ವಿ 45 ಉಡಾಹಕದ ಯಶಸ್ವಿ ಉಡಾವಣೆ, ಗಮ್ಯದತ್ತ ಸಾಗುತ್ತಿರುವ ರಾಕೆಟ್

0
544

ಭಾರತದ ಎಮಿಸ್ಯಾಟ್​ ಮತ್ತು ವಿವಿಧ ರಾಷ್ಟ್ರಗಳ ಒಟ್ಟು 28 ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ 45 ಉಡಾವಣಾ ವಾಹನ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಉಡಾಹಕವು ನಿಗದಿತ ಗಮ್ಯದತ್ತ ಸಾಗುತ್ತಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಶ್ರೀಹರಿಕೋಟಾ: ಇಂದು (ಏಪ್ರೀಲ್ 1) ಭಾರತದ ಎಮಿಸ್ಯಾಟ್​ ಮತ್ತು ವಿವಿಧ ರಾಷ್ಟ್ರಗಳ ಒಟ್ಟು 28 ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ 45 ಉಡಾವಣಾ ವಾಹನ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಉಡಾಹಕವು ನಿಗದಿತ ಗಮ್ಯದತ್ತ ಸಾಗುತ್ತಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಪಿಎಸ್​ಎಲ್​ವಿ 45 ಉಡಾಹಕ ನಿಗದಿಯಂತೆ 9.30ಕ್ಕೆ ಸರಿಯಾಗಿ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು ಎಂದು ಇಸ್ರೋ ಹೇಳಿದೆ.

ಎಮಿಸ್ಯಾಟ್​ ಉಪಗ್ರಹವನ್ನು ನಿಗದಿತ ಭೂಸ್ಥಿರ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿತು. ಇದೀಗ ಇನ್ನುಳಿದ 28 ಉಪಗ್ರಹಗಳನ್ನು ವಿವಿಧ ಕಕ್ಷೆಗಳಲ್ಲಿ ಇರಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಇಸ್ರೋ ತಿಳಿಸಿದೆ.