ಎಬಿಡಿ ವಿಲಿಯರ್ಸ್ ದಾಖಲೆ ಮುರಿದ ರನ್ ಮೆಶಿನ್ ವಿರಾಟ್ ಕೊಹ್ಲಿ

0
895

ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 4000 ರನ್ ಗಳಿಸಿದ ದಾಖಲೆಗೆ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಪಾತ್ರವಾಗಿದ್ದಾರೆ.

ರಾಂಚಿ: ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 4000 ರನ್ ಗಳಿಸಿದ ದಾಖಲೆಗೆ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಪಾತ್ರವಾಗಿದ್ದಾರೆ. 

ಆಸ್ಟ್ರೇಲಿಯಾ ವಿರುದ್ದ ಸಾಗುತ್ತಿರುವ ತೃತೀಯ ಏಕದಿನ ಪಂದ್ಯದಲ್ಲಿ ಈ ನೂತನ ಮೈಲುಗಲ್ಲನ್ನು ಕೊಹ್ಲಿ ಮುರಿದಿದ್ದಾರೆ. ಅಂದ ಹಾಗೆ ಏಕದಿನ ಕ್ರಿಕೆಟ್‌ನಲ್ಲಿ 4000 ರನ್ ಗಳಿಸಿದ ನಾಲ್ಕನೇ ಭಾರತೀಯ ಕಪ್ತಾನ ಎಂಬ ಗೌರವಕ್ಕೂ ಕೊಹ್ಲಿ ಪಾತ್ರವಾಗಿದ್ದಾರೆ. 

ನಾಯಕನಾಗಿ ಕೊಹ್ಲಿ ತಮ್ಮ 63ನೇ ಇನ್ನಿಂಗ್ಸ್‌ನಲ್ಲಿ 4000 ಮೈಲುಗಲ್ಲನ್ನು ತಲುಪಿದ್ದಾರೆ. ಈ ಮೂಲಕ ನಾಯಕನಾಗಿ ಅತಿ ವೇಗದಲ್ಲಿ 4000 ರನ್‌ಗಳ ದಾಖಲೆಯ ನ್ನು ಬರೆದಿದ್ದಾರೆ. 

ಪ್ರಸ್ತುತ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿ ವಿಲಿಯರ್ಸ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ವಿಲಿಯರ್ಸ್ 77ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಬರೆದಿದ್ದರು. 

ಭಾರತೀಯ ನಾಯಕರುಗಳ ಪೈಕಿ ಕೊಹ್ಲಿ ಮುಂದಿರುವ ಮಹೇಂದ್ರ ಸಿಂಗ್ ಧೋನಿ (6641), ಮೊಹಮ್ಮದ್ ಅಜರುದ್ದೀನ್ (5239) ಹಾಗೂ ಸೌರವ್ ಗಂಗೂಲಿ (5104) ರನ್ ಗಳಿಸಿದ್ದಾರೆ. 

ಒಟ್ಟಾರೆಯಾಗಿ ಏಕದಿನ ಕ್ರಿಕೆಟ್ ನಲ್ಲಿ ನಾಯಕನಾಗಿ 4000 ರನ್ ಗಳಿಸಿದ 12ನೇ ಕಪ್ತಾನ ಎಂದೆನಿಸಿಕೊಂಡಿದ್ದಾರೆ. 

ಏತನ್ಮಧ್ಯೆ ವಿರಾಟ್ ಕೊಹ್ಲಿ ಏಕದಿನದಲ್ಲಿ 41ನೇ ಶತಕ ಸಾಧನೆ ಮಾಡಿದ್ದಾರೆ.