ಎಫ್‌ಟಿಐಐ ಮುಖ್ಯಸ್ಥ ಸ್ಥಾನಕ್ಕೆ ಅನುಪಮ್‌ ಖೇರ್‌ ರಾಜೀನಾಮೆ

0
331

ಬಾಲಿವುಡ್ ನಟ ಅನುಪಮ್ ಖೇರ್ ಅವರು ಪುಣೆಯ ಫಿಲಂ ಅಂಡ್‌ ಟೆಲಿವಿಷನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ (ಎಫ್‌ಟಿಐಐ) ಮುಖ್ಯಸ್ಥ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ನವದೆಹಲಿ(ಪಿಟಿಐ): ಬಾಲಿವುಡ್ ನಟ ಅನುಪಮ್ ಖೇರ್ ಅವರು ಪುಣೆಯ ಫಿಲಂ ಅಂಡ್‌ ಟೆಲಿವಿಷನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ (ಎಫ್‌ಟಿಐಐ) ಮುಖ್ಯಸ್ಥ ಸ್ಥಾನಕ್ಕೆ ಅಕ್ಟೋಬರ್ 31 ರ ಬುಧವಾರ ರಾಜೀನಾಮೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಟಿ.ವಿ.ಷೋದಲ್ಲಿ ಪಾಲ್ಗೊಳ್ಳಲು ದೀರ್ಘ ಅವಧಿವರೆಗೆ ಅಮೆರಿಕಕ್ಕೆ ತೆರಳಬೇಕಾಗಿರುವ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ‌‌‌ಅವರು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

2017 ಅಕ್ಟೋಬರ್‌ನಲ್ಲಿ ಎಫ್‌ಟಿಐಐ ಅಧ್ಯಕ್ಷರಾಗಿ ಖೇರ್‌ ಅವರನ್ನು ನೇಮಕ ಮಾಡಲಾಗಿತ್ತು