ಎನ್‌ಎಫ್‌ಆರ್‌ಎ ಮುಖ್ಯಸ್ಥರಾಗಿ “ಆರ್. ಶ್ರೀಧರನ್‌

0
905

ಕೇಂದ್ರ ಸರ್ಕಾರ ನೂತನವಾಗಿ ರಚಿಸಿರುವ ರಾಷ್ಟ್ರೀಯ ಹಣಕಾಸು ಲೆಕ್ಕ ಪರಿಶೋಧನಾ ಗುಣಮಟ್ಟ ಜಾರಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ)ದ ಮುಖ್ಯಸ್ಥರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಆರ್‌.ಶ್ರೀಧರನ್‌ ನೇಮಕಗೊಂಡಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ನೂತನವಾಗಿ ರಚಿಸಿರುವ ರಾಷ್ಟ್ರೀಯ ಹಣಕಾಸು ಲೆಕ್ಕ ಪರಿಶೋಧನಾ ಗುಣಮಟ್ಟ ಜಾರಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ)ದ ಮುಖ್ಯಸ್ಥರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಆರ್‌.ಶ್ರೀಧರನ್‌ ನೇಮಕಗೊಂಡಿದ್ದಾರೆ.

1983ರ ಐಎಎಸ್‌ ಬ್ಯಾಚ್‌ನ, ಕರ್ನಾಟಕ ಕೇಡರ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀಧರನ್‌ ಅವರು ಮೂರು ವರ್ಷಗಳ ಅವಧಿಗೆ ಈ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

ಲೆಕ್ಕಪರಿಶೋಧನೆ ಕ್ಷೇತ್ರದಲ್ಲಿನ ಹಗರಣಗಳ ಪರಿಶೀಲನೆ, ಗುಣಮಟ್ಟ ಸುಧಾರಣೆ, ಜಾರಿ ಮತ್ತು ದೊಡ್ಡ ಕಂಪೆನಿಗಳ ಹಣಕಾಸು ಲೆಕ್ಕ ಪರಿಶೋಧನೆ ನಿಯಂತ್ರಣದ ಅಗತ್ಯವನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಕಳೆದ ಮಾರ್ಚ್‌ 1ರಂದು ಪ್ರಾಧಿಕಾರ ರಚಿಸುವ ನಿರ್ಧಾರ ಕೈಗೊಂಡಿತ್ತು.