ಎಟಿಪಿ ಸಿಂಗಲ್ಸ್‌ ರ‍್ಯಾಂಕಿಂಗ್‌ : ರೋಜರ್‌ ಫೆಡರರ್‌ ಗೆ ಬಡ್ತಿ

0
27

ವಿಶ್ವದ ಮಾಜಿ ನಂ. 1 ಆಟಗಾರ, ಸ್ವಿಜರ್ಲೆಂಡ್‌ನ ರೋಜರ್‌ ಫೆಡರರ್‌ ಮೇ 6 ರ ಸೋಮವಾರ ನೂತನವಾಗಿ ಬಿಡುಗಡೆಯಾದ ಎಟಿಪಿ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ ಮತ್ತೆ ಮೂರನೇ ಸ್ಥಾನಕ್ಕೆ ಮರಳಿದ್ದಾರೆ.

ಪ್ಯಾರಿಸ್‌: ವಿಶ್ವದ ಮಾಜಿ ನಂ. 1 ಆಟಗಾರ, ಸ್ವಿಜರ್ಲೆಂಡ್‌ನ ರೋಜರ್‌ ಫೆಡರರ್‌ ಸೋಮವಾರ ನೂತನವಾಗಿ ಬಿಡುಗಡೆಯಾದ ಎಟಿಪಿ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ ಮತ್ತೆ ಮೂರನೇ ಸ್ಥಾನಕ್ಕೆ ಮರಳಿದ್ದಾರೆ. 
 
ಮ್ಯೂನಿಚ್‌ ಓಪನ್‌ನ ಕ್ವಾರ್ಟರ್‌ಫೈನಲ್ಸ್‌ ಹಂತದಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ಸೋತ ಹಿನ್ನೆಲೆಯಲ್ಲಿ ದಾಖಲೆ 20 ಗ್ರ್ಯಾನ್‌ ಸ್ಪ್ಯಾಮ್‌ ಕಿರೀಟಗಳ ಒಡೆಯ, ಫೆಡರರ್‌ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಅಗ್ರಸ್ಥಾನ ಕಾಯ್ದುಕೊಂಡರೆ, ಸ್ಪೇನ್‌ ತಾರೆ ರಾಫೆಲ್‌ ನಡಾಲ್‌ ದ್ವಿತೀಯ ಸ್ಥಾನ ಪಡೆದಿದ್ದಾರೆ. 

ಡಬ್ಲ್ಯುಟಿಎ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ ಜಪಾನ್‌ನ ನವೊಮಿ ಒಸಾಕಾ ಮೊದಲ ಸ್ಥಾನದಲ್ಲಿ ಅಬಾಧಿತರಾದರೆ, ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮತ್ತು ರೊಮೇನಿಯಾದ ಸಿಮೊನಾ ಹ್ಯಾಲೆಪ್‌ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿದ್ದಾರೆ. ಜರ್ಮನಿಯ ಏಂಜಲಿಕ್‌ ಕೆರ್ಬರ್‌ ನಾಲ್ಕನೇ ಸ್ಥಾನ ಅಲಂಕರಿಸಿದರೆ, ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ ಐದನೇ ಸ್ಥಾನದಲ್ಲಿದ್ದಾರೆ.