ಎಟಿಪಿ ವಿಶ್ವ ರ‍್ಯಾಂಕಿಂಗ್ ಪಟ್ಟಿ : ಪ್ರಜ್ಞೇಶ್‌ ಗುಣೇಶ್ವರನ್‌ ಶ್ರೇಷ್ಟ ಸಾಧನೆ

0
201

ಭಾರತದ ಟೆನಿಸ್‌ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌, ಏಪ್ರೀಲ್ 15 ರ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 80ನೇ ಸ್ಥಾನಕ್ಕೇರಿದ್ದಾರೆ.

ನವದೆಹಲಿ (ಪಿಟಿಐ): ಭಾರತದ ಟೆನಿಸ್‌ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌, ಏಪ್ರೀಲ್ 15 ರ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 80ನೇ ಸ್ಥಾನಕ್ಕೇರಿದ್ದಾರೆ.

ಇದು ಪ್ರಜ್ಞೇಶ್‌ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಚೆನ್ನೈನ 29 ವರ್ಷದ ಆಟಗಾರ, ಈ ವರ್ಷದ ಫೆಬ್ರುವರಿಯಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿದ ಸಾಧನೆ ಮಾಡಿದ್ದರು. ಪ್ರಜ್ಞೇಶ್‌ ಅವರು ಈ ಮೊದಲು 82ನೇ ಸ್ಥಾನದಲ್ಲಿದ್ದರು. ಇಂಡಿಯಾನ ವೆಲ್ಸ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದ ಅವರು ಎರಡು ಸ್ಥಾನ ಬಡ್ತಿ ಹೊಂದಿದ್ದಾರೆ.

ಬಿಎನ್‌ಪಿ ಪರಿಬಾಸ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದ ಪ್ರಜ್ಞೇಶ್‌, ಮಿಯಾಮಿ ಓಪನ್‌ನಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದರು.

ರಾಮಕುಮಾರ್‌ ರಾಮನಾಥನ್‌ ಅವರು 157ನೇ ಸ್ಥಾನಕ್ಕೆ ಇಳಿದಿದ್ದಾರೆ. ಅವರು 16 ಸ್ಥಾನ ಕಳೆದುಕೊಂಡಿದ್ದಾರೆ. 

ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸರ್ಬಿಯಾದ ನೊವಾಕ್ ಜೊಕೊವಿಕ್ ಎರಡನೇ ಸ್ಥಾನವನ್ನು ಸ್ಪೇನ್ ನ ರಾಫೆಲ್ ನಡಾಲ್ ಮೂರನೇ ಸ್ಥಾನವನ್ನು ಜರ್ಮನಿಯ ಅಲೆಕ್ಸಾಂಡರ್ ಝೆರೆವ್ ಅವರು ಪಡೆದಿದ್ದಾರೆ.