ಎಟಿಪಿ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ” ರಫೆಲ್‌ ನಡಾಲ್‌”

0
24

2018 ಮೇ 21 ರಂದು ಎಟಿಪಿ ಬಿಡುಗಡೆ ಮಾಡಿದ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರು ಅಗ್ರಸ್ಥಾನಕ್ಕೇರಿದ್ದಾರೆ.

ಪ್ಯಾರಿಸ್‌ (ಎಎಫ್‌ಪಿ): 2018 ಮೇ 21 ರಂದು ಎಟಿಪಿ ಬಿಡುಗಡೆ ಮಾಡಿದ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರು ಅಗ್ರಸ್ಥಾನಕ್ಕೇರಿದ್ದಾರೆ.

ಭಾನುವಾರ ನಡೆದ ಇಟಾಲಿಯನ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ನಡಾಲ್‌, ಸ್ವಿಟ್ಜರ್‌ಲೆಂಡ್‌ನ ಆಟಗಾರ ರೋಜರ್‌ ಫೆಡರರ್‌ ಅವರನ್ನು ಹಿಂದಿಕ್ಕಿದ್ದಾರೆ.

ನಡಾಲ್‌ ಅವರು ತಮ್ಮ ಖಾತೆಯಲ್ಲಿ ಒಟ್ಟು 8,770 ಪಾಯಿಂಟ್ಸ್‌ ಹೊಂದಿದ್ದಾರೆ. ಎರಡನೇ ಸ್ಥಾನಕ್ಕೆ ಕುಸಿದಿರುವ ರೋಜರ್‌ ಫೆಡರರ್‌ ಅವರು ಒಟ್ಟು 8,670 ಪಾಯಿಂಟ್ಸ್‌ ಹೊಂದಿದ್ದಾರೆ.

**

ಅಗ್ರ ಸ್ಥಾನದಲ್ಲಿ ಹಲೆಪ್‌

ಇಟಾಲಿಯನ್ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಸೋತರೂ ಸಿಮೋನಾ ಹಲೆಪ್ ಅವರು ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಮತ್ತು ಗಾರ್ಬೈನ್ ಮುಗುರುಜಾ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮರಿಯಾ ಶರಪೋವಾ 11 ಸ್ಥಾನಗಳ ಬಡ್ತಿ ಕಂಡು 29ನೇ ಸ್ಥಾನಕ್ಕೇರಿದ್ದಾರೆ.