ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ನಗಾಲ್‌ಗೆ ಪ್ರಶಸ್ತಿ

0
6

ಭಾರತದ ಸುಮೀತ್‌ ನಗಾಲ್‌ ನೇರ ಸೆಟ್‌ಗಳಿಂದ ಸ್ಥಳೀಯ ನೆಚ್ಚಿನ ಆಟಗಾರ ಫಾಕುಂಡೊ ಬೊಗ್ನಿಸ್‌ ಅವರನ್ನು ಸೋಲಿಸಿ 54,160 ಡಾಲರ್‌ ಬಹುಮಾನದ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಬ್ಯೂನಸ್‌ ಏರ್ಸ್‌, ಆರ್ಜೆಂಟೀನಾ (ಪಿಟಿಐ): ಭಾರತದ ಸುಮೀತ್‌ ನಗಾಲ್‌ ನೇರ ಸೆಟ್‌ಗಳಿಂದ ಸ್ಥಳೀಯ ನೆಚ್ಚಿನ ಆಟಗಾರ ಫಾಕುಂಡೊ ಬೊಗ್ನಿಸ್‌ ಅವರನ್ನು ಸೋಲಿಸಿ 54,160 ಡಾಲರ್‌ ಬಹುಮಾನದ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಈ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದ ಫೈನಲ್‌ನಲ್ಲಿ ನಗಾಲ್‌ 6–4, 6–2 ರಿಂದ ಎಂಟನೇ ಶ್ರೇಯಾಂಕದ ಬೊಗ್ನಿಸ್‌ ಅವರನ್ನು ಸೋಲಿಸಿದರು.  ಫೈನಲ್‌ ಒಂದು ಗಂಟೆ 37 ನಿಮಿಷಗಳವರೆಗೆ ಬೆಳೆಯಿತು.

22 ವರ್ಷದ ಹರ್ಯಾಣ ಆಟಗಾರ ಸುಮೀತ್‌ಗೆ ಇದು ವೃತ್ತಿ ಜೀವನದ ಎರ ಡನೇ ಚಾಲೆಂಜರ್ ಪ್ರಶಸ್ತಿ. 2017ರಲ್ಲಿ ಬೆಂಗಳೂರಿನಲ್ಲಿ ಅವರು ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಈ ಜಯದೊಂದಿಗೆ ಸೆಪ್ಟೆಂಬರ್ 30 ರ ಸೋಮವಾರ ಪ್ರಕಟವಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅವರು 135ನೇ ಸ್ಥಾನಕ್ಕೇರಿದ್ದಾರೆ.