ಎಕ್ಸಿಮ್‌ ಬ್ಯಾಂಕ್‌ಗೆ 6,000 ಕೋಟಿ ರೂ. ಬಂಡವಾಳ ನೆರವು : ಕೇಂದ್ರ ಸಚಿವ ಸಂಪುಟ ಅನುಮೋದನೆ

0
301

ಸಾರ್ವಜನಿಕ ವಲಯದ ಎಕ್ಸಿಮ್‌ ಬ್ಯಾಂಕ್‌ಗೆ 6,000 ಕೋಟಿ ರೂ.ಗಳ ಬಂಡವಾಳ ನೆರವು ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಹೊಸದಿಲ್ಲಿ : ಸಾರ್ವಜನಿಕ ವಲಯದ ಎಕ್ಸಿಮ್‌ ಬ್ಯಾಂಕ್‌ಗೆ 6,000 ಕೋಟಿ ರೂ.ಗಳ ಬಂಡವಾಳ ನೆರವು ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. 

ಬ್ಯಾಂಕಿನ ಬಂಡವಾಳವನ್ನು 10ರಿಂದ 20 ಸಾವಿರ ಕೋಟಿ ರೂ.ಗೆ ಏರಿಸುವ ಪ್ರಸ್ತಾಪವನ್ನು ಸಚಿವ ಸಂಪುಟ ಅಂಗೀಕರಿಸಿದೆ. ಎಕ್ಸಿಮ್‌ ಬ್ಯಾಂಕ್‌ಗೆ ಬಂಡವಾಳ ನೆರವು ನೀಡುವುದರಿಂದ ರಫ್ತು ವಲಯಕ್ಕೆ ಸಾಲ ವಿತರಣೆ ಹಾಗೂ ರಫ್ತುದಾರರಿಗೆ ಅನುಕೂಲಕರವಾಗಲಿದೆ. 

ರಫ್ತುದಾರರಿಗೆ ಸಾಲ ಸೌಲಭ್ಯ ಒದಗಿಸುವ ಭಾರತದ ಪ್ರಮುಖ ಬ್ಯಾಂಕ್‌ ಎಕ್ಸಿಮ್‌ ಬ್ಯಾಂಕ್‌ ಆಗಿದೆ. 1982ರಲ್ಲಿ ಸರಕಾರ ಇದನ್ನು ಸ್ಥಾಪಿಸಿತ್ತು. ದೇಶದ ರಫ್ತು ವಲಯಕ್ಕೆ ಹಣಕಾಸು ನೆರವು ಮೂಲಕ ಉತ್ತೇಜನ ನೀಡುವುದು ಇದರ ಉದ್ದೇಶ.