ಎಎಚ್‌ಎಫ್‌ಗೆ ಮುಷ್ತಾಕ್‌ ಅಹ್ಮದ್‌ ಉಪಾಧ್ಯಕ್ಷ

0
302

ಭಾರತದ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್‌ ಅವರು ಏಷ್ಯನ್‌ ಹಾಕಿ ಫೆಡರೇಷನ್‌ನ (ಎಎಚ್‌ಎಫ್‌) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನವದೆಹಲಿ (ಪಿಟಿಐ): ಭಾರತದ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್‌ ಅವರು ಏಷ್ಯನ್‌ ಹಾಕಿ ಫೆಡರೇಷನ್‌ನ (ಎಎಚ್‌ಎಫ್‌) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹಾಕಿ ಇಂಡಿಯಾದ ಅಧ್ಯಕ್ಷರಾಗಿರುವ ಅಹ್ಮದ್‌, ನಾಲ್ಕು ವರ್ಷಗಳ ಕಾಲ ಆಡಳಿತದಲ್ಲಿರಲಿದ್ದಾರೆ. ಅವರು ಎಎಚ್‌ಎಫ್‌ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಹಾಕಿ ಇಂಡಿಯಾದ ಉಪಾಧ್ಯಕ್ಷರಾಗಿರುವ ಆಸಿಮಾ ಅಲಿ ಅವರೂ ಎಎಚ್‌ಎಫ್‌ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜಪಾನ್‌ನ ಗಿಫುದಲ್ಲಿ ನಡೆದ ಎಎಚ್‌ಎಫ್‌ ಕಾಂಗ್ರೆಸ್‌ನಲ್ಲಿ ಇಬ್ಬರನ್ನೂ ಆಯ್ಕೆ ಮಾಡಲಾಯಿತು.
# ಏಷ್ಯನ್‌ ಹಾಕಿ ಫೆಡರೇಷನ್‌ನ (ಎಎಚ್‌ಎಫ್‌)  ಅಧ್ಯಕ್ಷ : ಅಬ್ದುಲ್ಲಾ ಆಫ್ ಪಹಾಂಗ್
# ಏಷ್ಯನ್‌ ಹಾಕಿ ಫೆಡರೇಷನ್‌ನ (ಎಎಚ್‌ಎಫ್‌) ಸ್ಥಾಪನೆ : 1958
# ಏಷ್ಯನ್‌ ಹಾಕಿ ಫೆಡರೇಷನ್‌ನ (ಎಎಚ್‌ಎಫ್‌) ಕೇಂದ್ರ ಕಚೇರಿ : ಕೌಲಾಲಂಪುರ (ಮಲೇಷ್ಯಾ)
# ಏಷ್ಯನ್‌ ಹಾಕಿ ಫೆಡರೇಷನ್‌ನ (ಎಎಚ್‌ಎಫ್‌)ನಲ್ಲಿ ಒಟ್ಟು 31 ರಾಷ್ಟ್ರಗಳು ಸದಸ್ಯತ್ವ ಹೊಂದಿವೆ