ಎಂ.ಆರ್.ಪೂವಮ್ಮಗೆ “ಮೈಸೂರು ಕ್ರೀಡಾಕೂಟ” ಉದ್ಘಾಟನೆ ಭಾಗ್ಯ

0
542

ಅಂತರರಾಷ್ಟ್ರೀಯ ಅಥ್ಲೀಟ್‌ ಎಂ.ಆರ್.ಪೂವಮ್ಮ ಅವರಿಗೆ ಈ ಬಾರಿಯ ದಸರಾ ಸಿ.ಎಂ ಕಪ್‌ ಕ್ರೀಡಾಕೂಟ ಉದ್ಘಾಟಿಸುವ ಭಾಗ್ಯ ಲಭಿಸಿದೆ.

ಮೈಸೂರು: ಅಂತರರಾಷ್ಟ್ರೀಯ ಅಥ್ಲೀಟ್‌ ಎಂ.ಆರ್.ಪೂವಮ್ಮ ಅವರಿಗೆ ಈ ಬಾರಿಯ ದಸರಾ ಸಿ.ಎಂ ಕಪ್‌ ಕ್ರೀಡಾಕೂಟ ಉದ್ಘಾಟಿಸುವ ಭಾಗ್ಯ ಲಭಿಸಿದೆ.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅಕ್ಟೋಬರ್ 10 ರ ಬುಧವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳೂರಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಪೂವಮ್ಮ, ಇಂಡೊನೇಷ್ಯಾದ ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದ 4×400 ಮೀಟರ್ಸ್‌ ರಿಲೇನಲ್ಲಿ ಚಿನ್ನ ಹಾಗೂ ಮಿಶ್ರ ರಿಲೇನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

‘ಹಲವಾರು ಪ್ರತಿಭಾವಂತ ಅಥ್ಲೀಟ್‌ಗಳನ್ನು ಬೆಳಕಿಗೆ ತಂದಿರುವ ಕ್ರೀಡಾಕೂಟ ಉದ್ಘಾಟಿಸಲು ಸಹಜವಾಗಿಯೇ ಖುಷಿ ಆಗುತ್ತಿದೆ. ಈ ಕ್ರೀಡಾಕೂಟದಲ್ಲಿ ನಾನೆಂದೂ ಭಾಗವಹಿಸಿಲ್ಲ. ಆದರೆ, ಈಗ ಉದ್ಘಾಟನೆಗೆ ಅವಕಾಶ ಸಿಕ್ಕಿದೆ’ ಎಂದು ಪೂವಮ್ಮ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದರು.