ಎಂಫಾರ್‌ಗೆ ‘ಸೆವೆನ್‌ ಸ್ಟಾರ್‌’ ಪ್ರಶಸ್ತಿ

0
18

ರಿಯಲ್‌ ಎಸ್ಟೇಟ್‌ ವಲಯದ ಎಂಫಾರ್‌ ಡೆವಲಪರ್ಸ್‌ ಸಂಸ್ಥೆಗೆ ನಿರ್ಮಾಣ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಕ್ರಿಸಿಲ್‌’ನ ‘ಸೆವೆನ್‌ ಸ್ಟಾರ್‌’ ಪ್ರಶಸ್ತಿ ಲಭಿಸಿದೆ.

ರಿಯಲ್‌ ಎಸ್ಟೇಟ್‌ ವಲಯದ ಎಂಫಾರ್‌ ಡೆವಲಪರ್ಸ್‌ ಸಂಸ್ಥೆಗೆ ನಿರ್ಮಾಣ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಕ್ರಿಸಿಲ್‌’ನ ‘ಸೆವೆನ್‌ ಸ್ಟಾರ್‌’ ಪ್ರಶಸ್ತಿ ಲಭಿಸಿದೆ.

ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕ್ರಿಸಿಲ್ ನಿರ್ದೇಶಕ ಸತೀಶ್ ರಾಮ್‍ಚಂದಾನಿ ಅವರು ಎಂಫಾರ್ ಸಂಸ್ಥೆಯ ಕಾರ್ಪೊರೇಟ್ ನಿರ್ವಹಣಾ ಘಟಕದ ಮುಖ್ಯಸ್ಥ ಶ್ಯಾಮ್ ದಾಮೋದರನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿನ ‘ಗ್ರೀನ್‌ ಹಾರ್ಟ್‌ ಫೇಸ್‌–4’  ಯೋಜನೆಯಲ್ಲಿ ಬಳಸಿರುವ ಹೊಸ ವಿನ್ಯಾಸ, ಕಚೇರಿ ಕಟ್ಟಡದ ಮಾದರಿ, ವಾಹನ ನಿಲ್ದಾಣ, ಕೆಳ ಅಂತಸ್ತಿನ ವಾಹನ ನಿಲ್ದಾಣ ಕಾಮಗಾರಿಗಳಲ್ಲಿ ಪ್ರಮುಖವಾಗಿ ಸುರಕ್ಷತೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.