ಎಂಎಸ್‌ಎಂಇ ಆರ್‌ಬಿಐ ಸಮಿತಿಗೆ ಸಿನ್ಹಾ ನೇತೃತ್ವ

0
431

ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಯು. ಕೆ. ಸಿನ್ಹಾ ನೇತೃತ್ವದಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ‘ಎಂಎಸ್‌ಎಂಇ’ ವಲಯದ ₹ 25 ಕೋಟಿವರೆಗಿನ ಸಾಲವನ್ನು ಒಂದು ಬಾರಿ ಪುನರ್‌ ಹೊಂದಾಣಿಕೆ ಮಾಡಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಆರ್‌ಬಿಐ ಈ ಸಮಿತಿ ರಚಿಸಿದೆ.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯದ  ದೀರ್ಘಾವಧಿ ಸುಸ್ಥಿರತೆಗೆ ಪರಿಹಾರ ಸೂಚಿಸಲು  ಪರಿಣತರ ಸಮಿತಿ ರಚಿಸಲಾಗಿದೆ.

ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಯು. ಕೆ. ಸಿನ್ಹಾ ನೇತೃತ್ವದಲ್ಲಿ  ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ‘ಎಂಎಸ್‌ಎಂಇ’ ವಲಯದ ₹ 25 ಕೋಟಿವರೆಗಿನ ಸಾಲವನ್ನು ಒಂದು ಬಾರಿ ಪುನರ್‌ ಹೊಂದಾಣಿಕೆ ಮಾಡಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಆರ್‌ಬಿಐ ಈ ಸಮಿತಿ ರಚಿಸಿದೆ.

ಎಂಟು ಮಂದಿ ಸದಸ್ಯರ ಈ ಸಮಿತಿಯು, ಈ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ  ಕಾರಣಗಳನ್ನೂ ಪರಿಶೀಲಿಸಲಿದೆ. ಈ ವರ್ಷದ ಜೂನ್‌ ಅಂತ್ಯದ ವೇಳೆಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ.

ವಿಶ್ವದಾದ್ಯಂತ ಜಾರಿಯಲ್ಲಿ ಇರುವ ಅತ್ಯುತ್ತಮ ಕ್ರಮಗಳು, ಭಾರತದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನೂ ಸಮಿತಿಯು ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಿದೆ.