ಉಯಿಘರ್ಸ್ ಮತ್ತು ಮುಸ್ಲಿಮರ ಮೇಲೆ ಚೀನಾ ದಬ್ಬಾಳಿಕೆ: ವಿಶ್ವಸಂಸ್ಥೆ

0
12

ಚೀನಾದಲ್ಲಿ ರಾಷ್ಟ್ರರಕ್ಷಣೆ ಮತ್ತು ಭದ್ರತೆಯ ಹೆಸರಿನಲ್ಲಿ ಉಯಿಘರ್ಸ್‌ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ಆರೋಪಿಸಿದೆ.

ಜಿನಿವಾ: ಚೀನಾದಲ್ಲಿ ರಾಷ್ಟ್ರರಕ್ಷಣೆ ಮತ್ತು ಭದ್ರತೆಯ ಹೆಸರಿನಲ್ಲಿ ಉಯಿಘರ್ಸ್‌ ಮತ್ತು ಅಲ್ಪಸಂಖ್ಯಾತ 
ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ವಿಶ್ವಸಂಸ್ಥೆ  ಆರೋಪಿಸಿದೆ. 

ಸುಮಾರು 2 ಲಕ್ಷಕ್ಕೂ ಅಧಿಕ ಉಯಿಘರ್ಸ್‌ ಮತ್ತು  ಮುಸ್ಲಿಂ ಅಲ್ಪಸಂಖ್ಯಾತರನ್ನು ಚೀನಾ ರಹಸ್ಯವಾಗಿ ಕ್ಯಾಂಪ್‌ಗಳಲ್ಲಿ ಇರಿಸಿದೆ. ಅವರನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅದು ಕೈಗೊಳ್ಳುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 

ಚೀನಾದಲ್ಲಿ ಅಕ್ರಮ ಮಸೀದಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ಉಗ್ರವಾದ ನಿಯಂತ್ರಣಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಇಸ್ಲಾಮಿಕ್ ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳಿಂದ ಗಂಭೀರ ಬೆದರಿಕೆ ಇದೆ. ಅವರು ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಅಗತ್ಯ ಭದ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಚೀನಾ ಹೇಳಿಕೆ ನೀಡಿದೆ. 

ಆದರೆ ಭದ್ರತೆಯ ಹೆಸರಿನಲ್ಲಿ ಚೀನಾ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿರುವ ವಿಶ್ವಸಂಸ್ಥೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಮತ್ತು ಜನಾಂಗೀಯ ನೀತಿಯ ಕುರಿತಂತೆ ಈಗಾಗಲೇ ಹಲವು ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ಚೀನಾ ನಡೆ ಆತಂಕಕಾರಿಯಾಗಿದೆ. ಹೀಗಾಗಿ ಅಲ್ಲಿ ತೊಂದರೆಗೊಳಗಾಗಿರುವವರ ಕುರಿತು ಗಮನ ಹರಿಸಬೇಕಿದೆ ಎಂದು ಹೇಳಿದೆ.