ಉಬರ್‌ ಆ್ಯಪ್‌ನಲ್ಲಿ ಹ್ಯಾಕಿಂಗ್ ದೋಷವನ್ನು ಕಂಡು ಹಿಡಿದಿದ್ದಕ್ಕಾಗಿ ಭಾರತೀಯ ಸಂಶೋಧಕನಿಗೆ ಸಿಕ್ತು 4.6 ಲಕ್ಷ ಬಹುಮಾನ!

0
20

ಭಾರತೀಯ ಸೈಬರ್‌ ಸುರಕ್ಷತಾ ಸಂಶೋಧಕ ಆನಂದ್‌ ಪ್ರಕಾಶ್‌ ಅವರು ಇತ್ತೀಚೆಗೆ ಉಬರ್‌ ಆ್ಯಪ್‌ನಲ್ಲಿ ಹ್ಯಾಕಿಂಗ್‌ ಬಗ್‌( ತಂತ್ರಾಂಶಕ್ಕೆ ಕನ್ನ ದೋಷ) ಇರುವುದನ್ನು ಕಂಡುಹಿಡಿದು ಸರಿಪಡಿಸಿದ್ದರಿಂದ, ಆನಂದ್‌ ಪ್ರಕಾಶ್‌ಗೆ ಬಹುಮಾನವನ್ನು ನೀಡಿ ಗೌರವಿಸಿದೆ.

ಸ್ಯಾನ್‌ ಫ್ರಾನ್ಸಿಸ್ಕೊ: ಭಾರತೀಯ ಸೈಬರ್‌ ಸುರಕ್ಷತಾ ಸಂಶೋಧಕ ಆನಂದ್‌ ಪ್ರಕಾಶ್‌ ಅವರು ಇತ್ತೀಚೆಗೆ ಉಬರ್‌ ಆ್ಯಪ್‌ನಲ್ಲಿ ಹ್ಯಾಕಿಂಗ್‌ ಬಗ್‌( ತಂತ್ರಾಂಶಕ್ಕೆ ಕನ್ನ ದೋಷ) ಇರುವುದನ್ನು ಕಂಡುಹಿಡಿದು ಸರಿಪಡಿಸಿದ್ದರಿಂದ, ಆನಂದ್‌ ಪ್ರಕಾಶ್‌ಗೆ ಬಹುಮಾನವನ್ನು ನೀಡಿ ಗೌರವಿಸಿದೆ.

ಹ್ಯಾಕರ್‌ಗಳು ಸುಲಭವಾಗಿ ಯಾವುದೇ ಬಳಕೆದಾರನ ಉಬರ್ ಖಾತೆಯಿಂದ ಲಾಗ್ ಇನ್ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ಆನಂದ್‌ ಕಂಡುಹಿಡಿದಿದ್ದರು. ಹಾಗಾಗಿ ಈ ಕುರಿತು ಮಾಹಿತಿಯನ್ನು ನೀಡಿದ್ದಕ್ಕಾಗಿ ಕಂಪನಿಯು ಸುಮಾರು 4.6 ಲಕ್ಷ ರೂಪಾಯಿ ಬಹುಮಾನವನ್ನು ನೀಡಿದೆ.

ಉಬರ್‌ ಆ್ಯಪ್‌ನಲ್ಲಿರುವ ದೋಷವು ಖಾತೆಯನ್ನು ಹ್ಯಾಕ್‌ ಮಾಡುವಷ್ಟು ದುರ್ಬಲವಾಗಿದ್ದು, ಸುಲಭವಾಗಿ ಹ್ಯಾಕರ್ಸ್‌ಗಳು ಯಾವುದೇ ಉಬರ್‌ ಈಟ್ಸ್‌ ಸೇರಿದಂತೆ ಉಬರ್‌ ಬಳಕೆದಾರನ ಖಾತೆ ಮೂಲಕ ಪ್ರವೇಶಿಸಬಹುದು. ಇದಕ್ಕೆ ಆ್ಯಪ್‌ ಅವಕಾಶ ಮಾಡಿಕೊಟ್ಟಿದೆ ಎಂದು ಆನಂದ್‌ ವಿವರಿಸಿದ್ದರು.

ಮಾಧ್ಯಮ ವರದಿಗಳ ಪ್ರಕಾರ ಉಬರ್‌ ಆ್ಯಪ್‌ನಲ್ಲಿನ ಎಪಿಐ ರಿಕ್ವೆಸ್ಟ್‌ ಕಾರ್ಯಾಚರಣೆಯಲ್ಲಿ ಆ ದೋಷವು ಇತ್ತು. ಉಬರ್‌ ಪ್ರಕಾರ,ಕಂಪನಿಯ ಬಗ್ ಬೌಂಟಿ ಕಾರ್ಯಕ್ರಮದ ಮೂಲಕ ದೋಷವನ್ನು ತಕ್ಷಣ ಸರಿಪಡಿಸಲಾಗಿದೆ. ಭಾರತೀಯ ಸಂಶೋಧಕರು ಸೇರಿದಂತೆ ವಿಶ್ವಾದ್ಯಂತ ಇರುವ 600ಕ್ಕೂ ಅಧಿಕ ಸಂಶೋಧಕರಿಗೆ 14,28,54,000 ರೂ.ಗಳನ್ನು ಪಾವತಿಸಲಾಗಿದೆ.

ಒಮ್ಮೆ ಉಬರ್‌ನಲ್ಲಿನ ದೋಷವನ್ನು ತೆಗೆದುಹಾಕಿದರೆ ಯಾರು ಬೇಕಾದರೂ ಉಬರ್ ಕ್ಯಾಬ್‌ನಲ್ಲಿ ಜೀವಿತಾವಧಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾದ ಲಾಭವನ್ನು ಪಡೆದುಕೊಳ್ಳಬಹುದು ಎಂದು ಆನಂದ್‌ ಒಮ್ಮೆ ವಿವರಿಸಿದ್ದರು. (ಏಜೆನ್ಸೀಸ್)