ಉದ್ದೀಪನ ಮದ್ದು ಸೇವನೆ ಅಥ್ಲೀಟ್ “ಸಂಜೀವನಿ ಜಾಧವ್” ಅಮಾನತು

0
14

ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ.

ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್  ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ.

ಹೋದ ವರ್ಷದ 2018 ರ ನವೆಂಬರ್‌ನಲ್ಲಿ ನಡೆದಿದ್ದ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು 10 ಸಾವಿರ ಮೀಟರ್ಸ್‌ ಓಟದಲ್ಲಿ ಸ್ಪರ್ಧಿಸಿದ್ದರು. 

ಆಗ ರಾಷ್ಟ್ರೀಯ ಉದ್ದೀಪನ ಮದ್ದು ಘಟಕವು (ನಾಡಾ) ನಡೆಸಿದ್ದ ಪರೀಕ್ಷೆಯಲ್ಲಿ  ಸಂಜೀವಿನಿ ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು.

ಆದರೆ. ಏ‍ಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅವರಿಗೆ ನಾಡಾ ಅನುಮತಿ ನೀಡಿತ್ತು. ಅವರು ಅಲ್ಲಿ ಕಂಚಿನ ಪದಕ ಗೆದ್ದಿದ್ದರು.

ಆದರೆ ಹೋದ ಬುಧವಾರ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ ನೇಮಕ ಮಾಡಿದ ಅಥ್ಲೆಟಿಕ್ಸ್‌ ಇಂಟಿಗ್ರಿಟಿ ಫೆಡರೇಷನ್ ಸಭೆಯಲ್ಲಿ ಸಂಜೀವಿನಿಯವರಿಗೆ ತಾತ್ಕಾಲಿಕ ಅಮಾನತು ಹೇರಲು ನಿರ್ಧರಿಸಲಾಯಿತು.

ನ್ಯಾಷನಲ್ ಆಂಟಿ-ಡೋಪಿಂಗ್ ಏಜೆನ್ಸಿ(ನಾಡಾ)ಯ ಕಾರ್ಯ

ನ್ಯಾಷನಲ್ ಆಂಟಿ-ಡೋಪಿಂಗ್ ಏಜೆನ್ಸಿ (ನಾಡಾ) ಭಾರತದಲ್ಲಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಡೋಪಿಂಗ್ ನಿಯಂತ್ರಣ ಕಾರ್ಯಕ್ರಮವನ್ನು ಉತ್ತೇಜಿಸುವುದು, ಸಂಯೋಜಿಸುವುದು ಮತ್ತು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಸಂಸ್ಥೆಯಾಗಿದೆ.

ನಾಡಾ ಸ್ಥಾಪನೆ : ನವೆಂಬರ್ 242005

ಪ್ರಸ್ತುತ ನಾಡಾದ ಸಿಇಒ : ನವೀನ್ ಅಗರವಾಲ್