ಉತ್ತರ ಪ್ರದೇಶದಲ್ಲಿ 10 ರೂ.ಗೆ ತ್ವರಿತ ವಿದ್ಯುತ್ ಸಂಪರ್ಕ

0
198

ಉತ್ತರ ಪ್ರದೇಶದಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಬಿಪಿಎಲ್ ಕಾರ್ಡುದಾರರು 10 ರೂ. ಪಾವತಿಸಿದರೆ ಸಾಕು. ಇಂತಹ ಯೋಜನೆಯೊಂದನ್ನು ಪರಿಚಯಿಸಲು ಉತ್ತರ ಪ್ರದೇಶ ವಿದ್ಯುತ್ ನಿಗಮ ಸಿದ್ಧತೆ ನಡೆಸಿದೆ.

ಲಖನೌ: ಉತ್ತರ ಪ್ರದೇಶದಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಬಿಪಿಎಲ್ ಕಾರ್ಡುದಾರರು 10 ರೂ. ಪಾವತಿಸಿದರೆ ಸಾಕು. ಇಂತಹ ಯೋಜನೆಯೊಂದನ್ನು ಪರಿಚಯಿಸಲು ಉತ್ತರ ಪ್ರದೇಶ ವಿದ್ಯುತ್ ನಿಗಮ ಸಿದ್ಧತೆ ನಡೆಸಿದೆ. 

ಯುಪಿಪಿಸಿಎಲ್ ಜಟ್‌ಪಟ್ ಕನೆಕ್ಷನ್ ಯೋಜನಾ ಮೂಲಕ ಹೊಸ ವಿದ್ಯುತ್ ಸಂಪರ್ಕಕ್ಕೆ ಕೋರಿರುವ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಮತ್ತು ಸಂಬಂಧಿತ ಎಲ್ಲ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಡೆಸಲು ಸಿದ್ಧತೆ ನಡೆಸಿದೆ. 

ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ಅವರ ಅರ್ಜಿ ಸಂಬಂಧಿತ ಪ್ರದೇಶದ ಇಂಜಿನಿಯರ್‌ಗಳಿಗೆ ರವಾನೆಯಾಗಿ, ಅರ್ಜಿದಾರರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. 

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಸಲಾಗಿದೆ, ಉಳಿದಂತೆ ಸುವಿಧಾ/ ಜನ್‌ ಸುವಿಧಾ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. 

ಬಿಪಿಎಲ್ ಕಾರ್ಡುದಾರರು ಅರ್ಜಿ ಜತೆಗೆ 10 ರೂ. ಮತ್ತು ಬಡತನ ರೇಖೆಗಿಂತ ಮೇಲಿನವರು 100 ರೂ. ಶುಲ್ಕ ಪಾವತಿಸಿದರೆ ಸಾಕಾಗುತ್ತದೆ. 
ಹೊಸ ವಿದ್ಯುತ್ ಸಂಪರ್ಕ ನೀಡಲು ವಿಳಂಬ ಮತ್ತು ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಿಗಮ ಈ ಕ್ರಮಕ್ಕೆ ಮುಂದಾಗಿದೆ.