ಉಗ್ರ ನಿಗ್ರಹ ಕಾನೂನು: ಯಾಸಿನ್‌ ಮಲಿಕ್‌ ನೇತೃತ್ವದ ಜೆಕೆಎಲ್‌ಎಫ್‌ಗೆ ನಿಷೇಧ

0
349

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ನೇತೃತ್ವದ ಜಮ್ಮು ಕಾಶ್ಮೀರ ವಿಮೋಚನಾ ರಂಗ (ಜೆಕೆಎಲ್‌ಎಫ್‌)ವನ್ನು ನಿಷೇಧಿಸಿದೆ.

ಹೊಸದಿಲ್ಲಿ: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ನೇತೃತ್ವದ ಜಮ್ಮು ಕಾಶ್ಮೀರ ವಿಮೋಚನಾ ರಂಗ (ಜೆಕೆಎಲ್‌ಎಫ್‌)ವನ್ನು ನಿಷೇಧಿಸಿದೆ.

 

ಪ್ರತ್ಯೇಕತಾ ಚಳವಳಿ, ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಭಯೋತ್ಪಾದನೆ ವಿರೋಧಿ ಕಾನೂನಿನ್ವಯ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ. 

ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ವಿವಿಧ ನಿಬಂಧನೆಗಳ ಅಡಿಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಗೆ ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ಈ ಕ್ರಮವನ್ನು ಕೈಗೊಂಡಿದೆ. 

ಜೆಕೆಎಲ್‌ಎಫ್‌ ಮುಖಂಡ ಯಾಸಿನ್‌ ಮಲಿಕ್‌ ಈಗಾಗಲೇ ಬಂಧನದಲ್ಲಿದ್ದು ಜಮ್ಮುವಿನ ಕೋಟ್‌ ಬಲ್ವಾಲ್‌ ಜೈಲಿನಲ್ಲಿರಿಸಲಾಗಿದೆ.