“ಉಗಾಂಡಾ”ದಲ್ಲಿ ಫೇಸ್​ಬುಕ್, ವಾಟ್ಸ್ಆ್ಯಪ್ ಬಳಕೆಗೂ ತೆರಿಗೆ!

0
20

ವಿಶ್ವದ ಹಿಂದುಳಿದ ದೇಶಗಳಲ್ಲಿ ಒಂದಾಗಿರುವ ಉಗಾಂಡಾದ ಸಂಸತ್ತು ವಿವಾದಾತ್ಮಕ ಕಾಯ್ದೆಯೊಂದಕ್ಕೆ ಒಪ್ಪಿಗೆ ನೀಡಿದೆ. ದೇಶದಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮಾಡುವವರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮಸೂದೆಯನ್ನು 2018 ಜೂನ್ 1 ರ ಶುಕ್ರವಾರ ಅಂಗೀಕರಿಸಿದೆ.

ಕಂಪಾಲಾ: ವಿಶ್ವದ ಹಿಂದುಳಿದ ದೇಶಗಳಲ್ಲಿ ಒಂದಾಗಿರುವ ಉಗಾಂಡಾದ ಸಂಸತ್ತು ವಿವಾದಾತ್ಮಕ ಕಾಯ್ದೆಯೊಂದಕ್ಕೆ ಒಪ್ಪಿಗೆ ನೀಡಿದೆ. ದೇಶದಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮಾಡುವವರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮಸೂದೆಯನ್ನು 2018 ಜೂನ್ 1 ರ ಶುಕ್ರವಾರ ಅಂಗೀಕರಿಸಿದೆ.

ಈ ಕಾಯ್ದೆಯನ್ವಯ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಟ್ವಿಟರ್, ವಾಟ್ಸ್ಆ್ಯಪ್ ಬಳಕೆದಾರರು ಪ್ರತಿದಿನ 3.21 ರೂ. (5 ಯುಎಸ್​ ಸೆಂಟ್​) ತೆರಿಗೆ ಪಾವತಿಸಬೇಕಿದೆ.

ಸಾಮಾಜಿಕ ಜಾಲತಾಣಗಳಿಂದ ವದಂತಿಗಳು ಹೆಚ್ಚಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ವದಂತಿಗಳನ್ನು ನಿಯಂತ್ರಿಸಲು ಹೊಸ ಕಾಯಿದೆ ರೂಪಿಸಲಾಗಿದೆ ಎಂದು ಉಗಾಂಡಾದ ಅಧ್ಯಕ್ಷ ಯೊವೆರಿ ಮ್ಯೂಸೆವೆನಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕಾಯಿದೆ ವಿರೋಧಿಸುವವರು ಹೇಳುವುದೇ ಬೇರೆ. 1986 ರಿಂದ ಅಧಿಕಾರದಲ್ಲಿರುವ ಅಧ್ಯಕ್ಷರ ವಿರುದ್ಧ ಕಟು ಟೀಕೆಗೆ ಕಡಿವಾಣ ಹಾಕಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಜು.1 ರಿಂದ ಈ ಕಾಯ್ದೆ ಜಾರಿಗೆ ಬರಲಿದೆ ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳನ್ನು ಬಳಸುವ ವ್ಯಕ್ತಿಗಳ ಮೇಲೆ ಹೇಗೆ ನಿಗಾ ಇಡಲಾಗುತ್ತದೆ? ಅವರಿಂದ ಹೇಗೆ ತೆರಿಗೆ ಸಂಗ್ರಹಿಸಲಾಗುತ್ತದೆ ಎಂಬ ಬಗ್ಗೆ ಅಧ್ಯಕ್ಷ ಯೊವೆರಿ ಯಾವುದೇ ಮಾಹಿತಿ ನೀಡಿಲ್ಲ. 2016ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೂ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಮೂಲಕ ಅಧ್ಯಕ್ಷ ಯೊವೆರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.