ಉಕ್ರೇನ್ ಅಧ್ಯಕ್ಷ ಸ್ಥಾನಕ್ಕೆ ಹಾಸ್ಯನಟ

0
429

ಉಕ್ರೇನ್ ನ ಅಧ್ಯಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಹಾಸ್ಯನಟ “ವೊಲೊಡಿಮರ್ ಝೆಲೆಂಸ್ಕಿ” ಅಧ್ಯಕ್ಷ ಹುದ್ದೆಗೇರಲಿದ್ದಾರೆ. ಹಾಲಿ ಅಧ್ಯಕ್ಷ ಪೆಟ್ರೊ ಪೊಸೊಶೆಂಕೊರನ್ನು ಪರಾಭವಗೊಳಿಸಿರುವ ಅನನುಭವಿ ರಾಜಕಾರಣಿ ಝೆಲೆಂಸ್ಕಿ ಉಕ್ರೇನ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಕೀವ್(ರಾಯಿಟರ್ಸ್):  ಉಕ್ರೇನ್ ನ ಅಧ್ಯಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ  ಹಾಸ್ಯನಟ “ವೊಲೊಡಿಮರ್ ಝೆಲೆಂಸ್ಕಿ” ಅಧ್ಯಕ್ಷ ಹುದ್ದೆಗೇರಲಿದ್ದಾರೆ. ಹಾಲಿ ಅಧ್ಯಕ್ಷ ಪೆಟ್ರೊ  ಪೊಸೊಶೆಂಕೊರನ್ನು ಪರಾಭವಗೊಳಿಸಿರುವ ಅನನುಭವಿ ರಾಜಕಾರಣಿ ಝೆಲೆಂಸ್ಕಿ ಉಕ್ರೇನ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಟಿ.ವಿ ಸೀರಿಯಲ್ ಗಳಲ್ಲಿ, ನಾಟಕಗಳಲ್ಲಿ ಹಾಸ್ಯನಟರಾಗಿ ಜನರನ್ನು ರಂಜಿಸಿರುವ  ಝೆಲೆಂಸ್ಕಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ.

ಒಟ್ಟು ಮತಗಳಲ್ಲಿ ಶೇ 73 ರಷ್ಟು ಮತಗಳನ್ನು ಪಡೆದಿರುವುದು ಅವರ ಜನಪ್ರೀಯತೆಗೆ ಸಾಕ್ಷಿಯಾಗಿದೆ.  ಝೆಲೆಂಸ್ಕಿ ಅವರ ಸಹ ನಟರು ಅವರ ಕಾರ್ಯಕ್ರಮದ ನಿರ್ಮಾಪಕರು ಮತ್ತು ಸಂಭಾಷಣಕಾರರೇ  ಝೆಲೆಂಸ್ಕಿ ಪರ ಪ್ರಚಾರದಲ್ಲಿ ತೊಡಗಿದ್ದರು.ತಮ್ಮ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ

# ಉಕ್ರೇನ್ ರಾಜಧಾನಿ : ಕೀವ್

# ಉಕ್ರೇನ್ ಪ್ರಧಾನಮಂತ್ರಿ : ವೋಲೋಡಿಮಿರ್ ಗ್ರಾಯ್ಸ್ಮನ್                                                     # ಉಕ್ರೇನ್ ಕರೆನ್ಸಿ : ಉಕ್ರೇನ್ ಹ್ರಿವ್ನಿಯ್