ಈ ಬಾರಿ ಸೆ. 25ಕ್ಕೆ “ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ” ಪ್ರದಾನ

0
25

ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಆದರೆ, ಪ್ರಸಕ್ತ ವರ್ಷ ಈ ದಿನದಂದು, ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳು ಏಷ್ಯಾಡ್​ನಲ್ಲಿ ಸ್ಪರ್ಧಿಸುತ್ತಿರುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್ 25ಕ್ಕೆ ಸಮಾರಂಭವನ್ನು ಮುಂದೂಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ.

ನವದೆಹಲಿ: ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಆದರೆ, ಪ್ರಸಕ್ತ ವರ್ಷ ಈ ದಿನದಂದು, ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳು ಏಷ್ಯಾಡ್​ನಲ್ಲಿ ಸ್ಪರ್ಧಿಸುತ್ತಿರುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್ 25ಕ್ಕೆ ಸಮಾರಂಭವನ್ನು ಮುಂದೂಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ.

ಏಷ್ಯಾಡ್ 18ನೇ ಆವೃತ್ತಿ ಇಂಡೋನೇಷ್ಯಾದಲ್ಲಿ ಆಗಸ್ಟ್ 18ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿದೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳು, ಕೋಚ್​ಗಳು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಸಲುವಾಗಿ ಬದಲಾವಣೆ ಮಾಡಲಾಗಿದೆ. ಇದಕ್ಕೆ ರಾಷ್ಟ್ರಪತಿ ಭವನದಿಂದಲೂ ಒಪ್ಪಿಗೆ ದೊರೆತಿದೆ. ಜತೆಗೆ ಏಷ್ಯನ್ ಗೇಮ್್ಸ ನಲ್ಲಿ ಭಾರತದ ಕ್ರೀಡಾಪಟುಗಳು ತೋರುವ ನಿರ್ವಹಣೆಯನ್ನು ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದು ಎಂದು ಕ್ರೀಡಾ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ತಿಳಿಸಿದ್ದಾರೆ.

ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್ ಅವರ ಜನ್ಮದಿನವನ್ನು (ಆಗಸ್ಟ್ 29) ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ದಿನದಂದು ಕ್ರೀಡಾ ಪ್ರಶಸ್ತಿ ಪ್ರದಾನ ಮಾಡುವುದು ಸಂಪ್ರದಾಯವಾಗಿ ಬೆಳೆದುಬಂದಿತ್ತು. ಆದರೆ ಹಿಂದೆಯೂ ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಈ ಸಮಾರಂಭದ ದಿನಾಂಕ ಬದಲಾದ ದೃಷ್ಟಾಂತಗಳಿವೆ. -ಪಿಟಿಐ

ಏಷ್ಯಾಡ್ ಬಳಿಕವೇ ಆಯ್ಕೆ ಸಮಿತಿ ಸಭೆ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸುಗಳನ್ನು ಸಲ್ಲಿಸಲು ಕಳೆದ ಏಪ್ರಿಲ್ 30 ಕಡೇ ದಿನಾಂಕವಾಗಿತ್ತು. ಆದರೆ ಏಷ್ಯನ್ ಗೇಮ್ಸ್​ನಲ್ಲಿ ಅಪೂರ್ವ ನಿರ್ವಹಣೆ ತೋರುವ ಕ್ರೀಡಾಪಟುಗಳನ್ನು ಈ ವರ್ಷವೇ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಶಿಫಾರಸು ಅಧಿಕಾರ ಕ್ರೀಡಾ ಸಚಿವಾಲಯಕ್ಕಿದೆ. ಇದಲ್ಲದೆ, ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯೂ ಏಷ್ಯಾಡ್ ಮುಗಿದ ನಂತರವೇ ನಡೆಯಲಿದೆ. ಆಗ, ಏಷ್ಯಾಡ್​ನಲ್ಲಿ ಮಿಂಚಿದ ಹೊಸ ಕ್ರೀಡಾಪಟುಗಳನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಬಹುದಾಗಿದೆ. ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್​ಗಾಂಧಿ ಖೇಲ್​ರತ್ನಕ್ಕೆ ವರ್ಷದಲ್ಲಿ ಗರಿಷ್ಠ ನಾಲ್ವರು ಕ್ರೀಡಾಪಟುಗಳನ್ನು ಆಯ್ಕೆ ಮಾಡಬಹುದಾಗಿದೆ. ಅರ್ಜುನ ಪ್ರಶಸ್ತಿಗೆ ಗರಿಷ್ಠ 17 ಕ್ರೀಡಾಪಟುಗಳನ್ನು ಆರಿಸಬಹುದು.