ಇ–ವಾಹನ ಬಿಡಿಭಾಗ ಆಮದು ಸುಂಕ ಇಳಿಕೆ

0
417

2019 ಜನೇವರಿ 30 ರ ಬುಧವಾರದಿಂದಲೇ ಜಾರಿಗೆ ಬರುವಂತೆ ವಿದ್ಯುತ್‌ ಚಾಲಿತ ವಾಹನಗಳ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ತಗ್ಗಿಸಲಾಗಿದೆ. ಶೇ 15 ರಿಂದ ಶೇ 30ರವರೆಗಿದ್ದ ಸುಂಕವು ಕ್ರಮವಾಗಿ ಶೇ 10 ರಿಂದ ಶೇ 15ಕ್ಕೆ ಇಳಿಕೆಯಾಗಿದೆ.

ನವದೆಹಲಿ (ಪಿಟಿಐ): 2019 ಜನೇವರಿ 30 ರ ಬುಧವಾರದಿಂದಲೇ ಜಾರಿಗೆ ಬರುವಂತೆ ವಿದ್ಯುತ್‌ ಚಾಲಿತ ವಾಹನಗಳ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ತಗ್ಗಿಸಲಾಗಿದೆ. ಶೇ 15 ರಿಂದ ಶೇ 30ರವರೆಗಿದ್ದ ಸುಂಕವು  ಕ್ರಮವಾಗಿ ಶೇ 10 ರಿಂದ ಶೇ 15ಕ್ಕೆ ಇಳಿಕೆಯಾಗಿದೆ.

ದೇಶದಲ್ಲಿಯೇ ವಾಹನಗಳ ಬಿಡಿಭಾಗಗಳ ಜೋಡಣೆ ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇ–ವಾಹನಗಳ ಬ್ಯಾಟರಿ ಪ್ಯಾಕ್‌ಗಳ ಮೇಲಿನ ಆಮದು ಸುಂಕದಿಂದ ವಿನಾಯ್ತಿ ನೀಡಲಾಗಿದೆ. ಶೇ 5ರಷ್ಟು ಸುಂಕ ಜಾರಿಯಲ್ಲಿತ್ತು. ಮೊಬೈಲ್‌ ಫೋನ್‌ಗಳ ಬ್ಯಾಟರಿ ಪ್ಯಾಕ್‌ಗಳ ಸುಂಕವನ್ನು ಶೇ 10 ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ.