ಇ-ಕಾಮರ್ಸ್​ಗೆ ರಿಲಯನ್ಸ್

0
508

ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಹೊಸ ಇ-ಕಾಮರ್ಸ್ ಕಂಪನಿ ಆರಂಭಿಸುವುದಾಗಿ ಹೇಳಿದ್ದಾರೆ. ಗುಜರಾತಿನಲ್ಲಿ ಮೊದಲು ವಹಿವಾಟು ಆರಂಭಿಸಿ ನಂತರ ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ.

ಸೂರತ್: ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಹೊಸ ಇ-ಕಾಮರ್ಸ್ ಕಂಪನಿ ಆರಂಭಿಸುವುದಾಗಿ ಹೇಳಿದ್ದಾರೆ. ಗುಜರಾತಿನಲ್ಲಿ ಮೊದಲು ವಹಿವಾಟು ಆರಂಭಿಸಿ ನಂತರ ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ. ಈ ಮೂಲಕ ಅಮೆರಿಕ ಮೂಲದ ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಸೆಡ್ಡು ಹೊಡೆಯಲು ಸಿದ್ಧತೆ ನಡೆಸಿದ್ದಾರೆ. 2019 ಜನೇವರಿ 18 ರ ಶುಕ್ರವಾರ ಗುಜರಾತ್ ಹೂಡಿಕೆದಾರರ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಅಂಬಾನಿ ಈ ಘೋಷಣೆ ಮಾಡಿದ್ದಾರೆ. ಹೊಸ ಇ-ಕಾಮರ್ಸ್ ಯೋಜನೆಯಿಂದ ಗುಜರಾತ್​ನ 12 ಲಕ್ಷ ದಿನಸಿ ಮತ್ತು ನಿತ್ಯಬಳಕೆ ವಸ್ತುಗಳ ಮಾರಾಟಗಾರರಿಗೆ ಅನುಕೂಲವಾಗಲಿದೆ. ಇಡೀ ರಾಜ್ಯವನ್ನು ಡಿಜಿಟಲ್ ಮಾಡುವಲ್ಲಿ ರಿಲಯನ್ಸ್ ಬದ್ಧವಾಗಿದೆ ಎಂದು ಅಂಬಾನಿ ಹೇಳಿದ್ದಾರೆ.

ಯಾಕೆ ಈ ನಿರ್ಧಾರ?: ಟೆಲಿಕಾಂ, ರಿಟೇಲ್ ವಲಯದಿಂದ ಶೇ. 25 ಲಾಭ ಪಡೆದಿರುವುದಾಗಿ ರಿಲಯನ್ಸ್ ಗುರುವಾರ ಘೋಷಿಸಿತ್ತು. 2025ಕ್ಕೆ ರಿಟೇಲ್, ಟೆಲಿಕಾಂ ವಲಯದ ಲಾಭ ಗಳಿಕೆಯನ್ನು ದ್ವಿಗುಣಗೊಳಿಸಲು ರಿಲಯನ್ಸ್​ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಫೆ. 2019ರಿಂದ ವಿದೇಶಿ ಇ-ಕಾಮರ್ಸ್ ಕಂಪನಿಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ದೇಶೀಯ ಕಂಪನಿಗಳಿಗೆ ಇದು ವರದಾನವಾಗುವ ಸಾಧ್ಯತೆಯಿದೆ.