ಇಸ್ರೋದಿಂದ ಭೂ ಅಧ್ಯಯನ ‘ಹೈಸಿಸ್’​ ಸೇರಿ ಜಾಗತಿಕ 30 ಉಪಗ್ರಹಗಳ ಉಡಾವಣೆ

0
683

ಭಾರತದ ಭೂವೀಕ್ಷಣಾ ಉಪಗ್ರಹ ಹೈಸಿಸ್(HysIS) ಹಾಗೂ ಇತರೆ ಎಂಟು ದೇಶಗಳ 30 ಉಪಗ್ರಹವನ್ನು ಹೊತ್ತ ಪಿಎಸ್​ಎಲ್​ವಿ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯಶಸ್ವಿಯಾಗಿ ಉಡಾವಣೆ ಮಾಡಿದೆ.

ನವದೆಹಲಿ: ಭಾರತದ ಭೂವೀಕ್ಷಣಾ ಉಪಗ್ರಹ ಹೈಸಿಸ್(HysIS) ಹಾಗೂ ಇತರೆ ಎಂಟು ದೇಶಗಳ 30 ಉಪಗ್ರಹವನ್ನು ಹೊತ್ತ ಪಿಎಸ್​ಎಲ್​ವಿ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ನವೆಂಬರ್ 29 ರ​ ಗುರುವಾರ ಬೆಳಗ್ಗೆ 9:58ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಹೈಸಿಸ್ ಉಪಗ್ರಹವನ್ನು ಇಸ್ರೋ ಅಭಿವೃದ್ಧಿ ಪಡಿಸಿದ್ದು, ಇದು ಐದು ವರ್ಷಗಳವರೆಗೆ ಕಾರ್ಯ ನಿರ್ವಹಿಸಲಿದೆ. ಇದು ಪೋಲಾರ್ ಸ್ಯಾಟಲೈಟ್​ ಲಾಂಚಿಂಗ್ ವೆಹಿಕಲ್ (ಪಿಎಸ್​ಎಲ್​ವಿ-ಸಿ43 ) ರಾಕೆಟ್​ ಕಾರ್ಯಾಚರಣೆಯ ಪ್ರಾಥಮಿಕ ಉಪಗ್ರಹವಾಗಿದೆ. ಇದು 380 ಕೆ.ಜಿ ತೂಕವಿದೆ.

ಭೂ ಮೇಲ್ಮೈನ ವಿದ್ಯುತ್ಕಾಂತೀಯ ವರ್ಣಪಟಲದ ಅತಿಗೆಂಪು ಮತ್ತು ಶಾರ್ಟ್ವೇವ್ ಅತಿಗೆಂಪು ಪ್ರದೇಶಗಳ ಬಳಿ ಕಾಣಲ್ಪಡುವ ಭೂಮಿಯ ಹೊರಮೇಲ್ಮೈ ಕುರಿತು ಅಧ್ಯಯನ ಮಾಡುವುದು ಹೈಸಿಸ್ ಉಪಗ್ರಹದ ಮೊದಲ ಗುರಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಎಂಟು ದೇಶಗಳ ಇತರೆ 30 ಉಪಗ್ರಹಗಳಲ್ಲಿ ಒಂದು ಸೂಕ್ಷ್ಮ ಹಾಗೂ 29 ನ್ಯಾನೋ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. 23 ಉಪಗ್ರಹಗಳು ಅಮೆರಿಕಕ್ಕೆ ಸೇರಿದ್ದು, ಉಳಿದ ಉಪ್ರಗ್ರಹ ಆಸ್ಟ್ರೇಲಿಯಾ, ಕೆನಡಾ ಕೊಲಂಬಿಯಾ, ಫಿನ್​ಲ್ಯಾಂಡ್​, ಮಲೇಶಿಯಾ, ನೆದರ್​ಲ್ಯಾಂಡ್​ ಹಾಗೂ ಸ್ಪೇನ್​ಗೆ ಸೇರಿವೆ. (ಏಜೆನ್ಸೀಸ್​)