ಇಸ್ರೊ 100ನೇ ಉಪಗ್ರಹ ಉಡಾವಣೆ ಯಶಸ್ವಿ

0
19

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿಸಿದ 100ನೇ ಉಪಗ್ರಹ ಉಡಾವಣೆ ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಧ್ರುವಗಾಮಿ ಉಡಾವಣಾ ವಾಹನ(ಪಿಎಸ್‌ಎಲ್‌ವಿ ಸಿ–40) ಬಾಹ್ಯಾಕಾಶಕ್ಕೆ ಹಾರಿತು ಎಂದು ಇಸ್ರೋ ಟ್ವೀಟ್‌ ಮಾಡಿದೆ.

’ರಾಕೆಟ್ ಕಾರ್ಟೊಸ್ಯಾಟ್–2 ದೂರಸಂವೇದಿ ಉಪಗ್ರಹ, ಸೂಕ್ಷ್ಮ ಉಪಗ್ರಹ, ನ್ಯಾನೊ ಉಪಗ್ರಹ ಹಾಗೂ 28 ವಿದೇಶಿ ನ್ಯಾನೊ ಉಪಗ್ರಹಗಳನ್ನು ಪಿಎಸ್‌ಎಲ್‌ವಿ -ಸಿ40 ಹೊತ್ತೊಯ್ದಿದೆ.