ಇಸ್ರೇಲ್‌ ಜತೆಗೆ ಭಾರತ ರಕ್ಷಣಾ ಒಪ್ಪಂದ: ನೌಕಾಪಡೆಗೆ ಬಲ

0
470

ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌(ಐಎಐ) ಜತೆಗೆ ಭಾರತ 77.7 ಕೋಟಿ ಡಾಲರ್‌ ಮೊತ್ತದ ಎಲ್‌ಆರ್‌ಎಸ್‌ಎಎಂ ವಾಯು ಹಾಗೂ ನೌಕಾಪಡೆಯ ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳ ಬಳಕೆಗೆ ಬೇಕಾಗುವ ವ್ಯವಸ್ಥೆಯನ್ನು ಪಡೆದುಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತೀಯ ನೌಕಾಪಡೆಯ 7 ನೌಕೆಗಳಿಗೆ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲು ಒಪ್ಪಂದ ಸಹಕಾರಿಯಾಗಲಿದೆ. 

ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸಂಸ್ಥೆಯ ಮೂಲಕ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಸ್ರೇಲ್‌ ನೌಕಾಪಡೆ ಹಾಗೂ ವಾಯುಪಡೆಯಲ್ಲಿ ಎಲ್‌ಆರ್‌ಎಸ್‌ಎಎಂ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದೆ. ಬರಕ್‌ 8 ಎಂಬ ವ್ಯವಸ್ಥೆಯನ್ನು ಭಾರತೀಯ ವಾಯುಪಡೆ ಹಾಗೂ ನೌಕಾಪಡೆಗೆ ಬಳಸಲು ಉದ್ಧೇಶಿಸಲಾಗಿದೆ. 

ಇಸ್ರೇಲ್‌ ಏರೋಸ್ಪೇಸ್‌ ಏಜೆನ್ಸಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದ್ದು, ಭಾರತದೊಂದಿಗಿನ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ. ಸ್ಪರ್ಧಾತ್ಮಕ ವಿಭಾಗದಿಂದಲೂ ಈ ಒಪ್ಪಂದ ಹೆಚ್ಚು ಪ್ರಯೋಜನಕಾರಿ ಎಂದು ಎಐಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಮ್ರೋದ್‌ ಶೆಫರ್ ಹೇಳಿದ್ದಾರೆ. 

ಯುನೈಟೆಡ್ ಸ್ಟೇಟ್ಸ್‌ ಹಾಗೂ ರಷ್ಯಾ ಹೊರತು ಪಡಿಸಿ, ಇಸ್ರೇಲ್‌ ಭಾರತಕ್ಕೆ ಅತಿ ಹೆಚ್ಚು ಶಸ್ತ್ರಾಸ್ತ್ರ ಪೂರೈಕೆ ಮಾಡುವ ದೇಶವಾಗಿದ್ದು, ಕೃಷಿ ಹಾಗೂ ಆಧುನಿಕ ತಂತ್ರಜ್ಞಾನಗಳ ವಿನಿಮಯದಲ್ಲಿ ಉಭಯ ದೇಶದ ನಾಯಕರು ಹೆಚ್ಚು ತೊಡಗಿಸಿಕೊಂಡಿದ್ದಾರೆ. 

ಕಳೆದ ವರ್ಷ ಐಎಐ 200 ಕೋಟಿ ಡಾಲರ್‌ ಮೊತ್ತದ ಒಪ್ಪಂದ ಬಾಕಿ ಆಗಿತ್ತು. ನೌಕಾಪಡೆ ಹಾಗೂ ವಾಯುಪಡೆಯ ಮಿಸೈಲ್‌ ಡಿಫೆನ್ಸ್‌ ಸಿಸ್ಟಮ್‌ನ ಸಂಬಂಧಿಸಿದ ಒಪ್ಪಂದ ಆಗಿರಲಿಲ್ಲ. 63 ಕೋಟಿ ಡಾಲರ್‌ಗೆ ಬಿಇಎಲ್‌ಗೆ ಬರಕ್‌ 8 ಸರ್‌ಫೇಸ್‌-ಟು ಏರ್‌ ಮಿಸೈಲ್‌ ಸಿಸ್ಟಮ್‌ ನ್ನು 4 ನೌಕೆಗಳಿಗೆ ಅಳವಡಿಸಲು ಚಿಂತಿಸಲಾಗಿತ್ತು. 

ಬರಾಕ್‌ 8ನ್ನು ಇಸ್ರೇಲ್‌ ರಕ್ಷಣಾ ಸಚಿವಾಲಯ ಹಾಗೂ ಭಾರತದ ಡಿಆರ್‌ಡಿಒ, ಉಭಯ ದೇಶದ ನೌಕಾಪಡೆ ಹಾಗೂ ಸ್ಥಳೀಯ ರಕ್ಷಣಾ ಸಂಸ್ಥೆಗಳ ಮೂಲಕ ಸಿದ್ಧಪಡಿಸಲಾಗಿತ್ತು.