ಇಶಾ ಕರ್ನಾಟಕ ರಾಜ್ಯದ ಮೊದಲ ಐಡಬ್ಲ್ಯುಎಂ

0
24

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಚೆಸ್ ಆಟಗಾರ್ತಿ ಇಶಾ ಶರ್ಮಾ, ಅಂತರರಾಷ್ಟ್ರೀಯ ಮಹಿಳಾ ಮಾಸ್ಟರ್ (ಐಡಬ್ಲ್ಯುಎಂ) ಪಟ್ಟಕ್ಕೇರಿದರು. ಈ ಸಾಧನೆ ಮಾಡಿದ ಕರ್ನಾಟಕ ರಾಜ್ಯದ ಮೊದಲ ಆಟಗಾರ್ತಿ ಎನಿಸಿದರು.

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಚೆಸ್ ಆಟಗಾರ್ತಿ ಇಶಾ ಶರ್ಮಾ, ಅಂತರರಾಷ್ಟ್ರೀಯ ಮಹಿಳಾ ಮಾಸ್ಟರ್ (ಐಡಬ್ಲ್ಯುಎಂ) ಪಟ್ಟಕ್ಕೇರಿದರು. ಈ ಸಾಧನೆ ಮಾಡಿದ ರಾಜ್ಯದ ಮೊದಲ ಆಟಗಾರ್ತಿ ಎನಿಸಿದರು.

ಹಂಗೆರಿಯ ಬೆಲಾಟೊನೆಲಿಯಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ‘ಸಮ್ಮರ್ ಎಂಡ್ ಬಲಾಟಾನ್ ಐಎಂ ಟೂರ್ನಿ’ಯಲ್ಲಿ ಅವರು ಅಗತ್ಯವಾಗಿದ್ದ ಮೂರನೇ ಐಡಬ್ಲ್ಯುಎಂ ನಾರ್ಮ್ ಗಳಿಸಿಕೊಂಡರು. ಈ ಟೂರ್ನಿಯಲ್ಲಿ 2186 ರೇಟಿಂಗ್ ಹೊಂದಿರುವ ಸ್ಲೊವಾಕಿಯಾದ ಡೇವಿಡ್ ಮುರ್ಕೊ, ರೇಟಿಂಗ್‌ನ ಬೆಲ್ಜಿಯಂನ ಲೆನರ್ಟ್ಸ್ ಲೆನರ್ಟ್‌ (2341) ಮತ್ತು ಇಂಗ್ಲೆಂಡ್‌ನ ಇಯೆಲ್ ಮಾರ್ಕ್ (2185) ಎದುರು ಜಯಗಳಿಸಿದರು.

ಹಂಗೆರಿಯ ಹಾಟ್ ಮಿನ್‌ (2388), ಸ್ಲೊವಾಕಿಯಾದ ಸುತಾ ಆ್ಯಂಡ್ರಾಜ್ (2268) ಹಾಗೂ ಹಂಗರಿಯ ಸಾತಿ ಒಲಿವರ್ (2223) ಎದುರು ಇಶಾ ಡ್ರಾ ಸಾಧಿಸಿದರು. ಮೊದಲ ನಾರ್ಮ್‌ ಅನ್ನು 2017ರ ಶಾರ್ಜಾ ಮಾಸ್ಟರ್ಸ್‌ನಲ್ಲಿ, ಎರಡನೇ ನಾರ್ಮ್‌ಅನ್ನು ಕಳೆದ ವರ್ಷ ಟರ್ಕಿಯಲ್ಲಿ ನಡೆದ ವಿಶ್ವ ಜೂನಿಯರ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ್ದರು.

ಹತ್ತಾರು ಪ್ರಶ​ಸ್ತಿ: ದಕ್ಷಿಣ ಕನ್ನಡದ ಬೆಳ್ತಂಗ​ಡಿ​ಯ​ವ​ರಾದ ಇಶಾ ರಾಷ್ಟ್ರೀಯ, ಅಂತಾ​ರಾ​ಷ್ಟ್ರೀಯ ಟೂರ್ನಿ​ಗ​ಳಲ್ಲಿ ಅನೇಕ ಪ್ರಶ​ಸ್ತಿ​ಗ​ಳನ್ನು ಗೆದ್ದಿ​ದ್ದಾರೆ. 2015ರಲ್ಲಿ ಅವರು ಮಹಿಳಾ ಕೆಡೆಟ್‌ ಮಾಸ್ಟರ್‌ ಪಟ್ಟ​ಕ್ಕೇ​ರಿ​ದ್ದರು. ಏಷ್ಯನ್‌ ಕಿರಿ​ಯರ ರ‍್ಯಾಪಿಡ್‌ ಟೂರ್ನಿ​ಯಲ್ಲಿ ಚಿನ್ನ ಗೆದ್ದಿದ್ದ ಅವ​ರಿಗೆ ಶ್ರೇಷ್ಠ ಮಹಿಳಾ ಆಟ​ಗಾರ್ತಿ ಪ್ರಶ​ಸ್ತಿಯೂ ಸಿಕ್ಕಿತ್ತು. 2014ರ ರಾಷ್ಟ್ರೀಯ ಶಾಲಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿ​ಸಿದ್ದ ಇಶಾ, ರಾಷ್ಟ್ರೀಯ ಅಂಡರ್‌-19 ಚಾಂಪಿ​ಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿ​ದ್ದರು.

ಡಬ್ಯು​ಐಎಂ ಗಳಿ​ಸು​ವುದು ಹೇಗೆ?

ಅಂತಾ​ರಾ​ಷ್ಟ್ರೀಯ ಚೆಸ್‌ ಫೆಡ​ರೇಷನ್‌ (ಫಿಡೆ) ಪ್ರಶ​ಸ್ತಿ​ಗಳು ಲಿಂಗ ಪ್ರತ್ಯೇ​ಕತೆ ಹೊಂದಿ​ರ​ದಿ​ದ್ದ​ರೂ, ಮಹಿಳಾ ಚೆಸ್‌ ಪಟು​ಗ​ಳಿ​ಗೆಂದೇ ನಾಲ್ಕು ಪ್ರಶ​ಸ್ತಿ​ಗ​ಳನ್ನು ನೀಡ​ಲಾ​ಗು​ತ್ತದೆ. ಓಪನ್‌ ಟೈಟಲ್‌ಗಳ ಜತೆ ಆಟ​ಗಾ​ರ್ತಿ​ಯರು ಈ ಪಟ್ಟಗಳನ್ನೂ ಹೊಂದ​ಬ​ಹು​ದಾ​ಗಿದೆ. ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಅತ್ಯು​ತ್ತಮ ಪಟ್ಟವಾದರೆ, 2ನೇ ಅತ್ಯು​ತ್ತಮ ಪಟ್ಟವೇ ಮಹಿಳಾ ಅಂತಾ​ರಾ​ಷ್ಟ್ರೀಯ ಮಾಸ್ಟರ್‌. ಇದಕ್ಕೆ ಮೂರು ನಾರ್ಮ್(ಟೂ​ರ್ನಿ​ಯಲ್ಲಿ ಶ್ರೇಷ್ಠ ಪ್ರದ​ರ್ಶ​ನ) ಗಳನ್ನು ಸಾಧಿ​ಸ​ಬೇ​ಕಿದೆ. ಜತೆಗೆ 2100 ರೇಟಿಂಗ್‌ ಅಂಕ​ಗ​ಳನ್ನು ಹೊಂದಿರಬೇಕಿದೆ.