ಐರೋಪ್ಯ ಸಂಸತ್ತು ಮಾನವ ಹಕ್ಕುಗಳ ಹೋರಾಟಗಾರರಿಗೆ ನೀಡುವ ಪ್ರತಿಷ್ಠಿತ ಸಖರೋವ್ ಪ್ರಶಸ್ತಿಯನ್ನು ಚೀನಾದಲ್ಲಿ ‘ಪ್ರತ್ಯೇಕತಾವಾದ’ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಇಲ್ಹಾಂ ತೋಹ್ತಿ ಅವರಿಗೆ ಅಕ್ಟೋಬರ್ 24 ರ ಗುರುವಾರ ಘೋಷಿಸಿದೆ.
ಸ್ಟ್ರಾಸ್ಬರ್ಗ್ (ಎಎಫ್ಪಿ): ಐರೋಪ್ಯ ಸಂಸತ್ತು ಮಾನವ ಹಕ್ಕುಗಳ ಹೋರಾಟಗಾರರಿಗೆ ನೀಡುವ ಪ್ರತಿಷ್ಠಿತ ಸಖರೋವ್ ಪ್ರಶಸ್ತಿಯನ್ನು ಚೀನಾದಲ್ಲಿ ‘ಪ್ರತ್ಯೇಕತಾವಾದ’ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಇಲ್ಹಾಂ ತೋಹ್ತಿ ಅವರಿಗೆ ಅಕ್ಟೋಬರ್ 24 ರ ಗುರುವಾರ ಘೋಷಿಸಿದೆ.
ಬೀಜಿಂಗ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮಾಜಿ ಪ್ರಾಧ್ಯಾಪಕರಾದ ತೋಹ್ತಿ ಅವರನ್ನು, ಪ್ರತ್ಯೇಕತೆಗಾಗಿ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಚೀನಾದ ನ್ಯಾಯಾಲಯ 2014ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
‘ಉಯಿಘರ್ ಜನರ ಧ್ವನಿ’ಯಾಗಿ ಕೆಲಸ ಮಾಡುತ್ತಿರುವ 50 ವರ್ಷದ ತೋಹ್ತಿ ಅವರಿಗೆ ಸೆಪ್ಟೆಂಬರ್ನಲ್ಲಿ ಯುರೋಪಿನ ಪ್ರತಿಷ್ಠಿತ ಮಾನವ ಹಕ್ಕು ಪ್ರಶಸ್ತಿ ‘ವಾಕ್ಲಾವ್ ಹ್ಯಾವೆಲ್’ ಸಂದಿತ್ತು.
2014ರ ಜನವರಿಯಲ್ಲಿ ತೋಹ್ತಿ ಅವರು ಬಂಧನಕ್ಕೆ ಒಳಗಾಗುವುದಕ್ಕೂ ಮುನ್ನ ಉಯಿಘರ್ ಆನ್ಲೈನ್ ವೆಬ್ಸೈಟ್ನಲ್ಲಿ ಉಯಿಘರ್ ಮತ್ತು ಚೀನಾ ನಡುವಿನ ಸಾಮಾಜಿಕ ವಿಷಯಗಳ ಕುರಿತು ಬರಹಗಳನ್ನು ಬರೆದಿದ್ದರು.