ಇಲೆಕ್ಟ್ರಿಕ್ ವಾಹನಗಳಿಗೆ ಶೀಘ್ರ ಹಸಿರು ನಂಬರ್​ಪ್ಲೇಟ್

0
14

ಇಲೆಕ್ಟ್ರಿಕ್ ವಾಹನಗಳಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್ ಅಳವಡಿಸುವುದನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ನವದೆಹಲಿ: ಇಲೆಕ್ಟ್ರಿಕ್ ವಾಹನಗಳಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್ ಅಳವಡಿಸುವುದನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ಇಲೆಕ್ಟ್ರಿಕ್ ವಾಹನಗಳನ್ನು ಪ್ರತ್ಯೇಕವಾಗಿ ಗುರುತಿಸಲು ಹಾಗೂ ಎಲ್ಲ ರೀತಿಯ ಇ-ವಾಹನಗಳಿಗೆ ನೋಂದಣಿ ಕಡ್ಡಾಯ ಮಾಡುವ ಸಲುವಾಗಿ ಸುಪ್ರೀಂ ಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿತ್ತು. ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಸರ್ಕಾರವನ್ನು ಈ ಸಂಬಂಧ ಕೋರ್ಟ್ ಪ್ರಶ್ನಿಸಿತು.

ನೀಲಿ, ಕೇಸರಿ ಸ್ಟಿಕ್ಕರ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ಇಂಧನ ಗುರುತಿಸುವ ಉದ್ದೇಶದಿಂದ ಪ್ರತ್ಯೇಕ ಸ್ಟಿಕ್ಕರ್ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಸಮ್ಮತಿಸಿವೆ. ಪೆಟ್ರೋಲ್ ಹಾಗೂ ಸಿಎನ್​ಜಿ ವಾಹನಗಳಿಗೆ ತಿಳಿ ನೀಲಿ ಬಣ್ಣ ಹಾಗೂ ಡೀಸೆಲ್ ವಾಹನಗಳಿಗೆ ಕೇಸರಿ ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಈ ಸ್ಟಿಕ್ಕರ್​ಗಳ ಮೇಲೆ ಹೊಲೋಗ್ರಾಮ್ ಕೂಡ ಇರಲಿದೆ. ಈ ಸ್ಟಿಕ್ಕರ್​ಗಳ ಮೂಲಕ ವಾಹನ ಹಾಗೂ ಮಾಲಿನ್ಯ ನಿಯಂತ್ರಿಸುವುದು ಸರ್ಕಾರದ ಆಲೋಚನೆಯಾಗಿದೆ. ವಿದೇಶಗಳಲ್ಲಿನ ಕೆಲ ನಗರಗಳಲ್ಲಿಯೂ ಈ ವ್ಯವಸ್ಥೆಯಿದೆ. ಸೆಪ್ಟೆಂಬರ್ 30ರೊಳಗೆ ಈ ಯೋಜನೆಯನ್ನು ಜಾರಿಗೊಳಿಸಬೇಕಿದೆ.