ಇರಾನ್‌ ಮೇಲೆ ಪುನಃ ಅಮೆರಿಕ ಆರ್ಥಿಕ ನಿರ್ಬಂಧ

0
19

ಇರಾನ್‌ ಮೇಲೆ ಅಮೆರಿಕ ಮತ್ತೊಮ್ಮೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದೆ. ಮೊದಲ ಹಂತದ ನಿರ್ಬಂಧಗಳು ಆಗಸ್ಟ್ 7 ರ ಮಂಗಳವಾರವೇ ಜಾರಿಗೆ ಬಂದಿದ್ದು, ಚಿನ್ನದ ವ್ಯಾಪಾರ, ಬ್ಯಾಂಕ್‌ ನೋಟುಗಳು, ಕಾರು, ಕಾರ್ಪೆಟ್‌, ಗ್ರಾಫೈಟ್‌, ಕಲ್ಲಿದ್ದಲು, ಅಲ್ಯುಮಿನಿಯಂ, ಸ್ಟೀಲ್‌ ಸೇರಿದಂತೆ ಪ್ರಮುಖ ಕೈಗಾರಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ಕ್ರಮ ಇರಾನ್‌ನ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ.

ವಾಷಿಂಗ್ಟನ್‌: ಇರಾನ್‌ ಮೇಲೆ ಅಮೆರಿಕ ಮತ್ತೊಮ್ಮೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದೆ. ಮೊದಲ ಹಂತದ ನಿರ್ಬಂಧಗಳು ಆಗಸ್ಟ್ 7 ರ ಮಂಗಳವಾರವೇ ಜಾರಿಗೆ ಬಂದಿದ್ದು, ಚಿನ್ನದ ವ್ಯಾಪಾರ, ಬ್ಯಾಂಕ್‌ ನೋಟುಗಳು, ಕಾರು, ಕಾರ್ಪೆಟ್‌, ಗ್ರಾಫೈಟ್‌, ಕಲ್ಲಿದ್ದಲು, ಅಲ್ಯುಮಿನಿಯಂ, ಸ್ಟೀಲ್‌ ಸೇರಿದಂತೆ ಪ್ರಮುಖ ಕೈಗಾರಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ಕ್ರಮ ಇರಾನ್‌ನ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. 

ಎರಡನೇ ಹಂತದ ನಿರ್ಬಂಧ ನವೆಂಬರ್‌ 5ರಿಂದ ಜಾರಿಗೆ ಬರಲಿದ್ದು, ಇರಾನ್‌ನಿಂದ ರಫ್ತಾಗುವ ತೈಲ ಉತ್ಪನ್ನಗಳ ಮೇಲೆ ನಿಷೇಧ ಹೇರಲಿದೆ. ಈಗಾಗಲೇ ಇರಾನ್‌ನ ಗ್ರಾಹಕರಾಗಿರುವ ಚೀನಾ, ಭಾರತ ಮತ್ತು ಟರ್ಕಿ ದೇಶಗಳು ಖರೀದಿ ಕಡಿತಗೊಳಿಸುವ ತೀರ್ಮಾನ ಪ್ರಕಟಿಸಿವೆ. 

ಹಲವು ದೇಶಗಳ ಮನವಿ ಹೊರತುಪಡಿಸಿ, ಮೇ 8ರಂದು ಇರಾನ್‌ನೊಂದಿಗಿನ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಿತು. ಕ್ಷಿಪಣಿಗಳ ಅಭಿವೃದ್ಧಿ ಹಾಗು ಅಣ್ವಸ್ತ್ರ ಕಾರ್ಯಕ್ರಮಗಳನ್ನು ಇನ್ನಷ್ಟು ಮುಂದುವರಿಸದಂತೆ ತಡೆಯುವ ಉದ್ದೇಶದಿಂದ ಇರಾನ್‌ ಮೇಲೆ ಆರ್ಥಿಕ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. 

ಇರಾನ್‌ನೊಂದಿಗೆ ವ್ಯಾಪಾರ ಮಾಡುತ್ತಿರುವ ಯಾವ ದೇಶವೂ ವ್ಯವಹಾರ ಮಾಡುವ ಹಾಗಿಲ್ಲ. ನಾನು ಇದನ್ನು ವಿಶ್ವಶಾಂತಿಗಾಗಿ ಕೇಳಿಕೊಳ್ಳುತ್ತಿದ್ದೇನೆ- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ