“ಇರಾಕ್” ಸಂಸತ್‌ಗೆ ಚುನಾವಣೆ

0
16

ಇರಾಕ್‌ ಸಂಸತ್‌ಗೆ 2018 ಮೇ 12 ರ ಶನಿವಾರ ಸಾರ್ವತ್ರಿಕ ಚುನಾವಣೆ ನಡೆಯಿತು. ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ವಿರುದ್ಧ ಗೆಲುವು ಘೋಷಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಬಾಗ್ದಾದ್: ಇರಾಕ್‌ ಸಂಸತ್‌ಗೆ 2018 ಮೇ 12 ರ ಶನಿವಾರ ಸಾರ್ವತ್ರಿಕ ಚುನಾವಣೆ ನಡೆಯಿತು.

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ವಿರುದ್ಧ ಗೆಲುವು ಘೋಷಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

329 ಸದಸ್ಯ ಬಲದ ಸಂಸತ್ತಿಗೆ 7 ಸಾವಿರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರ ಸಂಖ್ಯೆ ಸುಮಾರು 2.5 ಕೋಟಿ. ಪರಮಾಣು ಒಪ್ಪಂದದ ಕಾರಣ
ದಿಂದ ಅಮೆರಿಕ ಹಾಗೂ ಇರಾನ್ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.