ಇಮ್ರಾನ್ ಖಾನ್ ಪ್ರಧಾನಿ ಪಟ್ಟ ಏರುವ ಮುನ್ನವೇ ಭ್ರಷ್ಟಾಚಾರ ನಿಗ್ರಹ ದಳ ವಿಚಾರಣೆ

0
14

ಪಾಕಿಸ್ತಾನದ ಖೈಬರ್‌ ಪಖ್ತುನ್‌ಖ್ವಾ ಸರಕಾರದ ಹೆಲಿಕಾಪ್ಟರ್‌ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣ ಸಂಬಂಧ ಪಾಕ್‌ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ದೇಶದ ರಾಷ್ಟ್ರೀಯ ಹೊಣೆಗಾರಿಕೆ ಘಟಕ(ಎನ್‌ಎಬಿ)ದ ಅಧಿಕಾರಿಗಳು ಆಗಸ್ಟ್ 7 ರ ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಪೇಶಾವರ: ಪಾಕಿಸ್ತಾನದ ಖೈಬರ್‌ ಪಖ್ತುನ್‌ಖ್ವಾ ಸರಕಾರದ ಹೆಲಿಕಾಪ್ಟರ್‌ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣ ಸಂಬಂಧ ಪಾಕ್‌ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ದೇಶದ ರಾಷ್ಟ್ರೀಯ ಹೊಣೆಗಾರಿಕೆ ಘಟಕ(ಎನ್‌ಎಬಿ)ದ ಅಧಿಕಾರಿಗಳು  ಆಗಸ್ಟ್ 7 ರ  ಮಂಗಳವಾರ ವಿಚಾರಣೆಗೆ ಒಳಪಡಿಸಿದರು. 

2013ರಿಂದ ಖೈಬರ್‌ ಪಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಪಿಟಿಐ ಸರಕಾರವಿದೆ. ಇಮ್ರಾನ್‌ ಅವರು 72 ಗಂಟೆಗಳ ಕಾಲ ಪ್ರಾಂತೀಯ ಸರಕಾರದ ಹೆಲಿಕಾಪ್ಟರ್‌ಗಳನ್ನು ಅನಧಿಕೃತವಾಗಿ ಬಳಿಸಿ ಬೊಕ್ಕಸಕ್ಕೆ 2.17 ದಶಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವೈಯಕ್ತಿಕ ಉದ್ದೇಶಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಳಸಲು ಅಧಿಕೃತವಾಗಿ ಅವರಿಗೆ ಅನುಮತಿ ಇಲ್ಲ. ಆಗಸ್ಟ್‌ರಂದು ಪಾಕಿಸ್ತಾನ ತೆಹ್ರೀಕಿ ಇನ್ಸಾಫ್‌(ಪಿಟಿಐ) ಮುಖ್ಯಸ್ಥ ಇಮ್ರಾನ್‌ ಅವರ ವಿರುದ್ಧ ಎನ್‌ಎಬಿ ಆರೋಪ ಪಟ್ಟಿ ಸಲ್ಲಿಸಿತ್ತು. 

ಈ ಮೊದಲು ವಿಚಾರಣೆಗೆ ಹಾಜರಾಗುವಂತೆ ಜುಲೈ 18ರಂದು ಇಮ್ರಾನ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಚುನಾವಣೆ ಸಂಬಂಧ ವಿಚಾರಣೆಯ ದಿನಾಂಕ ಮುಂದೂಡುವಂತೆ ಖಾನ್‌ ಅವರ ಕೋರಿಕೆ ಹಿನ್ನೆಲೆಯಲ್ಲಿ ಮಂಗಳವಾರ ದಿನಾಂಕ ನಿಗದಿಪಡಿಸಲಾಗಿತ್ತು. ಇಮ್ರಾನ್‌ ಅವರು ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಎನ್‌ಎಬಿ ಪೇಶಾವರ ಕಚೇರಿಯ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. 

ಇಮ್ರಾನ್‌ ಮತ್ತು ಅವರ ವಕೀಲರಿಗಾಗಿ 15 ಪಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯನ್ನು ಎನ್‌ಎಬಿ ನೀಡಿದೆ. ಇದಕ್ಕೆ ಉತ್ತರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನಾನೇನೂ ತಪ್ಪು ಮಾಡಿಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಈ ಆರೋಪ ಹೊರಿಸಲಾಗಿದೆಇಮ್ರಾನ್‌ ಖಾನ್‌, ಪಾಕ್‌ ನಿಯೋಜಿತ ಪ್ರಧಾನಿ