ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂಗೆ ‘ಡ್ಯಾನ್‌ ಡೇವಿಡ್‌’ ಪ್ರಶಸ್ತಿ (ಇತಿಹಾಸ ಸಂಶೋಧನೆಗೆ ಸಂದ ಗೌರವ)

0
535

ಭಾರತ ಮೂಲದ ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ ಡ್ಯಾನ್ ಡೇವಿಡ್‌ ಪ್ರಶಸ್ತಿ ಲಭಿಸಿದೆ.

ಜೆರುಸಲೇಂ (ಪಿಟಿಐ):ಭಾರತ ಮೂಲದ ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ ಡ್ಯಾನ್ ಡೇವಿಡ್‌ ಪ್ರಶಸ್ತಿ ಲಭಿಸಿದೆ.

ಆಧುನಿಕ ಯುಗದ ಆರಂಭದಲ್ಲಿ ಏಷಿಯನ್ನರು, ಯುರೋಪಿಯನ್ನರು, ಉತ್ತರ ಮತ್ತು ದಕ್ಷಿಣ ಅಮೆರಿಕದ ಜನರು ಸಾಂಸ್ಕೃತಿಕವಾಗಿ ಮುಖಾಮುಖಿಯಾದ ಬಗ್ಗೆ ಸಂಜಯ್ ಅವರು ಕೈಗೊಂಡ ಸಂಶೋಧನೆ–ಅಧ್ಯಯನವನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟೆಲ್‌ ಅವೀವ್‌ನಲ್ಲಿರುವ ಡ್ಯಾನ್‌ ಡೇವಿಡ್ ಪ್ರತಿಷ್ಠಾನ ತಿಳಿಸಿದೆ.

ಸಂಜಯ್‌ ಅವರು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್ ಅವರ ಸಹೋದರ. ಇತಿಹಾಸ ಕುರಿತ ಸಂಶೋಧನೆಗಾಗಿ ಸಂಜಯ್‌ ಅವರಿಗೆ ಇನ್ಫೊಸಿಸ್‌ ಪ್ರಶಸ್ತಿ ಸಹ ಲಭಿಸಿದೆ. ಸದ್ಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ವಿಭಾಗದಲ್ಲಿ ಇರ್ವಿಂಗ್‌ ಮತ್ತು ಜೀನ್‌ಸ್ಟೋನ್‌ ಅಧ್ಯಯನ ಪೀಠದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಯ ಮೊತ್ತ 7 ಕೋಟಿ ಇದ್ದು, ಷಿಕಾಗೊ ವಿ.ವಿಯ ಪ್ರೊ.ಕೆನ್ನೆತ್‌ ಪೊಮೆರಾಂಝ್ ಅವರೊಂದಿಗೆ ಈ ಮೊತ್ತವನ್ನು ಸಂಜಯ್‌ ಹಂಚಿಕೊಳ್ಳಲಿದ್ದಾರೆ.