ಇಂಧನ ಶೋಧಕ್ಕೆ “ಇಸ್ರೋ” ಚಂದ್ರಯಾನ!

0
22

ಮುಂದಿನ 250 ವರ್ಷದ ಇಂಧನ ಬೇಡಿಕೆ ಪೂರೈಸುವ ಪರಮಾಣು ಶಕ್ತಿ ಶೋಧಕ್ಕಾಗಿ ಇನ್ನೊಂದು ಚಂದ್ರಯಾನ ಕೈಗೊಳ್ಳಲು ಇಸ್ರೋ ಸಜ್ಜಾಗಿದೆ. ಈ ವಿಷಯದಲ್ಲಿ ಇಸ್ರೋ ಇತರ ಬಾಹ್ಯಾಕಾಶ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ನವದೆಹಲಿ: ಮುಂದಿನ 250 ವರ್ಷದ ಇಂಧನ ಬೇಡಿಕೆ ಪೂರೈಸುವ ಪರಮಾಣು ಶಕ್ತಿ ಶೋಧಕ್ಕಾಗಿ ಇನ್ನೊಂದು ಚಂದ್ರಯಾನ ಕೈಗೊಳ್ಳಲು ಇಸ್ರೋ ಸಜ್ಜಾಗಿದೆ. ಈ ವಿಷಯದಲ್ಲಿ ಇಸ್ರೋ ಇತರ ಬಾಹ್ಯಾಕಾಶ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಚಂದ್ರನ ದಕ್ಷಿಣ ಭಾಗದಲ್ಲಿ ಲಭ್ಯವಿದೆ ಎನ್ನಲಾದ ಹೀಲಿಯಂ-3 ಅಣು ಕುರಿತ ಅಧ್ಯಯನಕ್ಕೆ ಅಕ್ಟೋಬರ್​ನಲ್ಲಿ ಭಾರತದ ಬಾಹ್ಯಾಕಾಶ ತಜ್ಞರು ಚಂದ್ರಯಾನ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಂದೊಮ್ಮೆ ಈ ಅಧ್ಯಯನ ನಿರೀಕ್ಷಿತ ಮಟ್ಟದಲ್ಲಿ ಸಾಗಿದರೆ ಲಕ್ಷಾಂತರ ಕೋಟಿ ರೂ.ಗಳ ಆದಾಯಕ್ಕೆ ಈ ಚಂದ್ರಯಾನ ಕಾರಣವಾಗಲಿದೆ.

ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಇಸ್ರೋದ ಮೈಲಿಗಲ್ಲಿಗೆ ಈ ಚಂದ್ರಯಾನವು ಹೊಸ ರೂಪ ನೀಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದು, ಭಾರತ ಸರ್ಕಾರ -ಠಿ; 830 ಕೋಟಿ ವಿನಿಯೋಗಿಸುತ್ತಿದೆ. ಈವರೆಗೆ ವಿಶ್ವದ ಯಾವುದೇ ಸಂಸ್ಥೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿಟ್ಟಿಲ್ಲ. ಆದರೆ ಈ ಹಿಂದಿನ ಚಂದ್ರಯಾನದ ಬಳಿಕ ನಾಸಾ ವಿಜ್ಞಾನಿಗಳು, ದಕ್ಷಿಣ ಭಾಗದಲ್ಲಿ ಹೀಲಿಯಂ-3 ಇರುವ ಸಾಧ್ಯತೆಯಿದೆ ಎಂದಿದ್ದರು. ಹೀಲಿಯಂನಿಂದ ರೇಡಿಯೋ ವಿಕಿರಣ ಮತ್ತು ತ್ಯಾಜ್ಯವಿಲ್ಲದ ಇಂಧನ ಸಿಗಲಿದೆ ಎನ್ನುವ ನಿರೀಕ್ಷೆ ವಿಜ್ಞಾನಿಗಳದ್ದು. -ಏಜೆನ್ಸೀಸ್

ಲಕ್ಷ ಕೋಟಿ ಲೆಕ್ಕಾಚಾರ!

ಒಂದು ಟನ್ ಹೀಲಿಯಂ-3ಗೆ 500 ಕೋಟಿ ಡಾಲರ್ ಮೌಲ್ಯವಿದೆ. ಅಂದಾಜಿನ ಪ್ರಕಾರ 2.50 ಲಕ್ಷ ಮೆಟ್ರಿಕ್ ಟನ್ ಹೀಲಿಯಂ-3 ಗಣಿಗಾರಿಕೆ ಮಾಡಬಹುದಾಗಿದೆ. ಇದರ ಮೊತ್ತ ಲಕ್ಷ ಕೋಟಿ ಡಾಲರ್ ದಾಟಲಿದೆ.

ಅಂತಾರಾಷ್ಟ್ರೀಯ ಹಕ್ಕು

ಹಾಲಿ ಕಾನೂನಿನ ಪ್ರಕಾರ ಚಂದ್ರ ಅಥವಾ ಬಾಹ್ಯಾಕಾಶದ ಮೇಲೆ ಯಾವುದೇ ದೇಶಕ್ಕೆ ಹಕ್ಕುಗಳಿಲ್ಲ. ಕಾನೂನು ತಜ್ಞರು ಹೇಳುವಂತೆ ಮೊದಲು ಹೋಗಿ ಈ ಬಗ್ಗೆ ಸಂಶೋಧನೆ ಹಾಗೂ ಅಭಿವೃದ್ಧಿ ಮಾಡುವವರಿಗೆ ಅಧಿಕಾರ ದೊರೆಯಲಿದೆ. ಆದರೆ ಭವಿಷ್ಯದಲ್ಲಿ ಇದೊಂದು ಅಂತಾರಾಷ್ಟ್ರೀಯ ಕಾನೂನು ಸಮರಕ್ಕೂ ಕಾರಣವಾಗಬಹುದು ಎನ್ನಲಾಗಿದೆ.

ಹೀಲಿಯಂ ಯಾನ

ಸದ್ಯಕ್ಕೆ ಅತಿ ಶಕ್ತಿಶಾಲಿ ಇಂಧನ ಯುರೇನಿಯಂ ಎಂದು ವಿಜ್ಞಾನ ಲೋಕ ಹೇಳುತ್ತಿದೆ. ಥೋರಿಯಂ ಬಳಕೆ ಬಗ್ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್​ಕಲಾಂ ಪ್ರಸ್ತಾಪಿಸಿದ್ದರೂ ತಂತ್ರಜ್ಞಾನವಿನ್ನೂ ಅಭಿವೃದ್ಧಿಯಾಗಿಲ್ಲ. ಈ ಹಂತದಲ್ಲಿ ಚಂದ್ರನ ದಕ್ಷಿಣ ಭಾಗದಲ್ಲಿ ಹೀಲಿಯಂ ಎಂಬ ಪರಮಾಣು ಇದೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಗ್ಗೆ ಸಂಶೋಧನೆಗೆ ಇಸ್ರೋ ಮುಂದಾಗಿದೆ. ಒಂದು ಅಂದಾಜಿನ ಪ್ರಕಾರ 10 ಲಕ್ಷ ಮೆಟ್ರಿಕ್ ಟನ್ ಹೀಲಿಯಂ ಪರಮಾಣು ಚಂದ್ರನಲ್ಲಿದೆ. ಅದರಲ್ಲಿ ಶೇ.25 ಭಾಗ ಮಾತ್ರ ಗಣಿಗಾರಿಕೆ ಮಾಡಲು ಸಾಧ್ಯವಿದೆ.