ಇಂದು ವಿಶ್ವ ಜಲ ದಿನ: ನೀರಿಗೆ ಬರವಿರುವ ಪ್ರದೇಶದಲ್ಲಿದ್ದಾರೆ 100 ಕೋಟಿ ಭಾರತೀಯರು!

0
534

ನೀರಿಗೆ ಕೊರತೆಯಿರುವ ಪ್ರದೇಶಗಳಲ್ಲಿ ಸುಮಾರು 100 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಇವರ ಪೈಕಿ 60 ಕೋಟಿ ಮಂದಿ ತೀವ್ರ ನೀರಿನ ಕೊರತೆಯಿರುವ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗವಾಗಿದೆ.

ಹೊಸದಿಲ್ಲಿ: ನೀರಿಗೆ ಕೊರತೆಯಿರುವ ಪ್ರದೇಶಗಳಲ್ಲಿ ಸುಮಾರು 100 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಇವರ ಪೈಕಿ 60 ಕೋಟಿ ಮಂದಿ ತೀವ್ರ ನೀರಿನ ಕೊರತೆಯಿರುವ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗವಾಗಿದೆ. 

ಕಳೆದ ಕೆಲವು ವರ್ಷಗಳಿಂದ ವಿಶ್ವಾದ್ಯಂತ ಸುಮಾರು 400 ಕೋಟಿ ಮಂದಿ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಈ ಸಂಖ್ಯೆ ಮುಂದಿನ ವರ್ಷಗಳಲ್ಲಿ ಅಧಿಕಗೊಳ್ಳುವ ಸಂಭವವಿದೆ ಎಂದು ವರದಿ ತಿಳಿಸಿದೆ. ನೀರಿಗೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ವಸಿಸುತ್ತಿರುವವರ ಸಂಖ್ಯೆ 2050ಕ್ಕೆ 500 ಕೋಟಿ ಮೀರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮಾರ್ಚ್‌ 22ರ ವಿಶ್ವ ಜಲ ದಿನದ ಅಂಗವಾಗಿ ಭೂಮಿಯ ಮೇಲ್ಮೈನಿಂದ ಕೆಳಗಿರುವ ಜಲದ ಸ್ಥಿತಿಗತಿ ವಿವರಣೆಯಿರುವ ವರದಿಯನ್ನು ಸಿದ್ಧ ಪಡಿಸಿದ್ದಾಗಿದೆ. 

2019 ಮಾರ್ಚ್‌ 22ರ ವಿಶ್ವ ಜಲ ದಿನದ  ಧ್ಯೇಯವಾಕ್ಯ :  ‘Leaving no one behind'(‘ಹಿಂದೆ ಯಾರೂ ಬಿಡುವುದಿಲ್ಲ’)

ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಳ, ನೀರಿನ ಮೂಲಗಳ ಮೇಲೆ ಹೆಚ್ಚಿ ಪ್ರಮಾಣದ ಹಿಡಿತ, ಹವಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ಅಂತರ್ಜಲ ಬರ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

2040ರ ವೇಳೆಗೆ ವಿಶ್ವದ 33 ರಾಷ್ಟ್ರಗಳು ತೀವ್ರ ನೀರಿನ ಕೊರತೆ ಎದುರಿಸಲಿವೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.