ಇಂದು ಏಷ್ಯನ್ ಗೇಮ್ಸ್​ಗೆ ತೆರೆ “ರಾಣಿ ರಾಂಪಾಲ್” ಭಾರತದ ಧ್ವಜಧಾರಿ

0
604

ಪ್ರತಿಷ್ಠಿತ ಏಷ್ಯನ್ ಗೇಮ್ಸ್​ಗೆ ಆಗಸ್ಟ್ 2 ರ ಭಾನುವಾರ ವಿಜೃಂಭಣೆಯ ತೆರೆ ಬೀಳಲಿದೆ. ಅದ್ಭುತ ಸಮಾರಂಭದ ಮೂಲಕ ಜಕಾರ್ತ-ಪಾಲೆಂಬಾಗ್ ಏಷ್ಯಾಡ್​ಗೆ ಆರಂಭ ನೀಡಿದ್ದ ಇಂಡೋನೇಷ್ಯಾ, ಸಮಾರೋಪ ಸಮಾರಂಭವನ್ನೂ ಜಗದ ಗಮನಸೆಳೆಯುವ ರೀತಿಯಲ್ಲಿ ಮಾಡಲು ನಿರ್ಧರಿಸಿದೆ.

 ಜಕಾರ್ತ: ಪ್ರತಿಷ್ಠಿತ ಏಷ್ಯನ್ ಗೇಮ್ಸ್​ಗೆ ಆಗಸ್ಟ್ 2 ರ ಭಾನುವಾರ ವಿಜೃಂಭಣೆಯ ತೆರೆ ಬೀಳಲಿದೆ. ಅದ್ಭುತ ಸಮಾರಂಭದ ಮೂಲಕ ಜಕಾರ್ತ-ಪಾಲೆಂಬಾಗ್ ಏಷ್ಯಾಡ್​ಗೆ ಆರಂಭ ನೀಡಿದ್ದ ಇಂಡೋನೇಷ್ಯಾ, ಸಮಾರೋಪ ಸಮಾರಂಭವನ್ನೂ ಜಗದ ಗಮನಸೆಳೆಯುವ ರೀತಿಯಲ್ಲಿ ಮಾಡಲು ನಿರ್ಧರಿಸಿದೆ. ಜಕಾರ್ತ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿರುವ ಟ್ರಾಫಿಕ್ ನಿವಾರಣೆಗಾಗಿ ಗೆಲೊರಾ ಬಂಗ್ ಕನೋ ಕ್ರೀಡಾ ಸಂರ್ಕಿಣಕ್ಕೆ ಪ್ರವೇಶ ಕಲ್ಪಿಸಿರುವ ಎಲ್ಲ ಮಾರ್ಗಗಳಲ್ಲಿ ಖಾಸಗಿ ವಾಹನಗಳಿಗೆ ನಿಷೇಧ ಹೇರಿದೆ. ಏಷ್ಯಾಡ್​ನ ಬಹುದೊಡ್ಡ ಯಶಸ್ಸಿನ ಬೆನ್ನಲ್ಲಿಯೇ 2032ರ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೂ ಇಂಡೋನೇಷ್ಯಾ ಬಿಡ್ ಸಲ್ಲಿಸಲಿದೆ ಎಂದು ಅಧ್ಯಕ್ಷ ಜೋಕೋ ವಿಡ್ಡೊಡೋ ಖಚಿತಪಡಿಸಿದ್ದಾರೆ. ಭಾರತ, ಚೀನಾ ಹಾಗೂ ಆಸ್ಟ್ರೇಲಿಯಾ ಕೂಡ 2032ರ ಒಲಿಂಪಿಕ್ಸ್ ಅತಿಥ್ಯಕ್ಕೆ ಬಿಡ್ ಸಲ್ಲಿಸುವುದಾಗಿ ಹೇಳಿವೆ. ‘ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿರಲಿದ್ದಾರೆ’ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ. ಈಗಾಗಲೇ ಪದಕ ಗೆದ್ದ ಹೆಚ್ಚಿನ ಕ್ರೀಡಾಪಟುಗಳು ತವರಿಗೆ ಮರಳಿದ್ದು, ಭಾರತದ ಸ್ಕಾ್ವಷ್, ಹಾಕಿ ಹಾಗೂ ಬ್ರಿಜ್ ವಿಭಾಗದ ತಂಡಗಳು ಮಾತ್ರ ಸಮಾರೋಪದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರಂಭ: ಸಂಜೆ 5.30, ನೇರಪ್ರಸಾರ: ಸೋನಿ ನೆಟ್​ವರ್ಕ್

ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಭಾರತದ ಕ್ರೀಡಾಪಟುಗಳು ಹಿಮಾ ದಾಸ್ 1 ಚಿನ್ನ 2 ಬೆಳ್ಳಿ

# ಪೂವಮ್ಮ 1 ಚಿನ್ನ 1 ಬೆಳ್ಳಿ

# ಜಿನ್ಸನ್ ಜಾನ್ಸನ್ 1 ಚಿನ್ನ 1 ಬೆಳ್ಳಿ

# ಮೊಹಮದ್ ಅನಾಸ್ 3 ಬೆಳ್ಳಿ

# ದ್ಯುತಿ ಚಂದ್ 2 ಬೆಳ್ಳಿ

# ರಾಜೀವ್ ಅರೋಕಿಯಾ 2 ಬೆಳ್ಳಿ

# ಧಾರುಣ್ ಅಯ್ಯಸ್ವಾಮಿ 2 ಬೆಳ್ಳಿ

# ಈಕ್ವೆಸ್ಟ್ರಿಯನ್ ಫೌದ್ ಮಿಜಾ 2 ಬೆಳ್ಳಿ

# ಟೇಬಲ್ ಟೆನಿಸ್ ಶರತ್ ಕಮಲ್ 2 ಕಂಚು

# ಸ್ಕಾ್ವಷ್ ದೀಪಿಕಾ ಪಲ್ಲಿಕಲ್ 1 ಬೆಳ್ಳಿ 1 ಕಂಚು

# ಜೋಶ್ನಾ ಚಿನ್ನಪ್ಪ 1 ಬೆಳ್ಳಿ 1 ಕಂಚು

# ಸೌರವ್ ಘೋಶಾಲ್ 2 ಕಂಚು